ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಿಂದ ಹೊಸಪೇಟೆ, ಹುಬ್ಬಳ್ಳಿ, ದಾವಣಗೆರೆ ಸೇರಿ ಪ್ರಮುಖ ನಗರಗಳಿಗೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ವಾಹನಗಳ ದಟ್ಟಣೆ ಅಧಿಕವಾಗಿದೆಯೇ ಹೊರತು ಸಂಚಾರ ನಿಯಮಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಕುರಿತಂತೆ ಸಂಬಂಧಪಟ್ಟವರು ಕೋಡಲೇ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಾವೇರಿ ನಗರದ ಪ್ರಮುಖ ಸ್ಥಳಗಳಲ್ಲೇ ಕೈಕೊಟ್ಟ ಸಿಗ್ನಲ್ ಲೈಟ್‌ಗಳು.. - ವಾಹನಗಳ ದಟ್ಟಣೆ
ಹಾವೇರಿ ಜಿಲ್ಲಾ ಕೇಂದ್ರ ಹಾವೇರಿಯಿಂದ ಹೊಸಪೇಟೆ, ಹುಬ್ಬಳ್ಳಿ, ದಾವಣಗೆರೆ ಸೇರಿ ಪ್ರಮುಖ ನಗರಿಗಳಿಗೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ನಗರದ ಹೆಸ್ಕಾಂ ಕಚೇರಿ, ಜಿಲ್ಲಾಸ್ಪತ್ರೆ ಮತ್ತು ನಗರಠಾಣೆ ಮುಂದೆ ಸಿಗ್ನಲ್ ಲೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ನಗರದ ಪ್ರಮುಖ ಸ್ಥಳಗಳಲ್ಲಿ ಹಾಳಾದ ಸಿಗ್ನಲ್ ಲೈಟ್‌ಗಳು
ನಗರದ ಹೆಸ್ಕಾಂ ಕಚೇರಿ, ಜಿಲ್ಲಾಸ್ಪತ್ರೆ ಮತ್ತು ನಗರಠಾಣೆ ಮುಂದೆ ಸಿಗ್ನಲ್ ಲೈಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ಷಟ್ಪಥ ಮಾಡುತ್ತಿರುವ ಹಿನ್ನೆಲೆ ಅಲ್ಲಿ ಸಂಚರಿಸುವ ವಾಹನಗಳು ಸಹ ನಗರದಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ನಗರದಲ್ಲಿ ವಾಹನಗಳ ದಟ್ಟಣೆ ಅಧಿಕವಾಗಲಾರಂಭಿಸಿದ್ದು, ನಗರದಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಕೂಡಲೇ ಸಿಗ್ನಲ್ ಲೈಟ್ಗಳನ್ನು ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.