ಕರ್ನಾಟಕ

karnataka

ETV Bharat / state

ಭೂಸ್ವಾಧೀನಕ್ಕೆ ರಟ್ಟಿಹಳ್ಳಿಯಲ್ಲಿ ರೈತರ ವಿರೋಧ: ಪ್ರತಿಭಟನೆಯಲ್ಲಿ ಇಂದು ಸಿದ್ದರಾಮಯ್ಯ ಭಾಗಿ - land acquisition in haveri issue

ರೈತರ ಭೂಸ್ವಾಧೀನ ಖಂಡಿಸಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ ಡಿ ಹಿರೇಮಠ ನಡೆಸುತ್ತಿರುವ ಪ್ರತಿಭಟನೆಯಲ್ಲಿಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಳ್ಳಲ್ಲಿದ್ದಾರೆ.

siddaramaiah to join protest against land acquisition in haveri
ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ

By

Published : Dec 11, 2020, 9:34 AM IST

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡಿತಿರೋ ಭೂಸ್ವಾಧೀನ ವಿರೋಧಿಸಿ ಹೋರಾಟದಲ್ಲಿಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಧಾರವಾಡ ಹೈಕೋರ್ಟ್​​ನ ಹಿರಿಯ ವಕೀಲ ಬಿ ಡಿ ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿದ್ದರಾಮಯ್ಯ ಸಾಥ್ ನೀಡಲಿದ್ದಾರೆ. ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಬಂದು ಅವರ ಹೋರಾಟವನ್ನು ಬೆಂಬಲಿಸಲಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್​​ ಕ್ಷೇತ್ರದಿಂದ ಸಿ.ಎಂ. ಯಡಿಯೂರಪ್ಪ ಕ್ಷೇತ್ರಕ್ಕೆ ನೀರು ಹರಿಸಲು ರೈತರ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಖಂಡಿಸಿ ರೈತ ಮುಖಂಡರ ಜೊತೆ ಬಿ ಡಿ ಹಿರೇಮಠ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಸಾಥ್​ ನೀಡುತ್ತಿರುವುದು ರೈತರಿಗೆ ಆನೆ ಬಲ ಬಂದಂತಾಗಿದೆ.

ಇದನ್ನೂ ಓದಿ:ರೈತರ ಭೂಸ್ವಾಧೀನ ಖಂಡಿಸಿ 5ನೇ ದಿನಕ್ಕೆ ಪ್ರತಿಭಟನೆ.. ಅನ್ನ-ನೀರು ತ್ಯಜಿಸಿದ ನ್ಯಾಯವಾದಿ ಬಿ ಡಿ ಹಿರೇಮಠ..

ABOUT THE AUTHOR

...view details