ಕರ್ನಾಟಕ

karnataka

ETV Bharat / state

ಔಷಧ ಸಿಂಪಡಣೆ ಮಷಿನ್​ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದ ಮಾನೆ

ಪೋರ್ಟೆಬಲ್ ಪವರ ಸ್ಪ್ರೇಯರ್ ಮಷಿನ್​ಗಳನ್ನು ಸ್ಥಳಿಯ ಪ್ರದೇಶಾಭಿವೃದ್ಧಿ ನಿಧಿ ಅಂದಾಜು 8 ಲಕ್ಷ ರೂ. ಗಳಲ್ಲಿ ತಾಲೂಕಿನ 42 ಗ್ರಾಮ ಪಂಚಾಯಿತಿಗಳಿಗೆ ಒಟ್ಟು, 50 ಮಷಿನ್​​ ನೀಡುವ ಯೋಜನೆಗೆ ಸಾಂಕೇತಿಕವಾಗಿ ತಾಲೂಕಿನ ವರ್ದಿ ಗ್ರಾಮದಲ್ಲಿ ಔಷಧ ಸಿಂಪಡಿಸುವ ಮೂಲಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು.

shrinivas mane
ವಿಧಾನ ಪರಿಷತ್​ ಸದಸ್ಯ ಶ್ರೀನಿವಾಸ ಮಾನೆ

By

Published : Apr 21, 2020, 2:10 PM IST

ಹಾನಗಲ್ :ಕೋವಿಡ್-19 ತಡೆಗಟ್ಟುವ ಉದ್ದೇಶದಿಂದ ಔಷಧ ಸಿಂಪಡಣೆ ಮಾಡುವ ಮಷಿನ್​ಗಳನ್ನು ವಿತರಿಸುವ ಯೋಜನೆಗೆ ತಾಲೂಕಿನಲ್ಲಿ ವಿಧಾನ ಪರಿಷತ್​ ಸದಸ್ಯ ಶ್ರೀನಿವಾಸ ಮಾನೆ ಚಾಲನೆ ನೀಡಿದರು.

ಪೋರ್ಟೆಬಲ್ ಪವರ್​​ ಸ್ಪ್ರೇಯರ್ ಯಂತ್ರಗಳನ್ನ ಸ್ಥಳಿಯ ಪ್ರದೇಶಾಭಿವೃದ್ಧಿ ನಿಧಿ ಅಂದಾಜು 8 ಲಕ್ಷ ರೂ. ಗಳಲ್ಲಿ ತಾಲೂಕಿನ 42 ಗ್ರಾಮ ಪಂಚಾಯಿತಿಗಳಿಗೆ ಒಟ್ಟು, 50 ಮಷಿನ್​​​ ನೀಡುವ ಯೋಜನೆಗೆ ಸಾಂಕೇತಿಕವಾಗಿ ತಾಲೂಕಿನ ವರ್ದಿ ಗ್ರಾಮದಲ್ಲಿ ಔಷಧ ಸಿಂಪಡಿಸುವ ಮೂಲಕ ಚಾಲನೆ ನೀಡಿದರು.

ಕೊರೊನಾ ವೈರಸ್ ತಡೆಗಟ್ಟಲು ಪ್ರತಿಯೊಬ್ಬರು ಸಹಕಾರದ ಅಗತ್ಯವಿದೆ. ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ತಾಲೂಕಿನ ಜನರಿಗೆ ಕರೆ ನೀಡಿದರು.

ABOUT THE AUTHOR

...view details