ಕರ್ನಾಟಕ

karnataka

ETV Bharat / state

ಸ್ವಾಮೀಜಿಗಳು ಚುನಾವಣೆಗೆ ಬಂದ್ರೆ ಜನ ಮತ ನೀಡಲ್ಲ: ಬಸವ ಜಯ ಮೃತ್ಯುಂಜಯ ಶ್ರೀ

ಈಗಾಗಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತಂತೆ ಪಾದಯಾತ್ರೆ ಹೋರಾಟ ನಡೆಸಿದ್ದೇವೆ. ಆದರೆ, ಮೀಸಲಾತಿ ನೀಡುವ ಭರವಸೆ ನೀಡಿದ್ದ ಆಗಿನ ಸಿಎಂ ಯಡಿಯೂರಪ್ಪ ಭರವಸೆ ಈಡೇರಿಸುವ ಮುನ್ನವೇ ಅಧಿಕಾರದಿಂದ ಕೆಳಗೆ ಇಳಿದರು. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆದರು. ಅವರು ಸಹ ಭರವಸೆ ನೀಡಿದ್ದರು. ಆದರೆ, ಅವರು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಕಳೆದ ಎರಡು ತಿಂಗಳಿಂದ ಬೊಮ್ಮಾಯಿ ಮೌನವಾಗಿದ್ದಾರೆ. ಇದೇ ರೀತಿ ತಮ್ಮ ಬಗ್ಗೆ ನಿರ್ಲಕ್ಷ್ಯವಹಿಸಿದರೆ ವಾಲ್ಮೀಕಿ ಶ್ರೀಗಳಂತೆ ತಾವು ಕೂಡ ಪ್ರತಿಭಟನೆಗೆ ಕುಳಿತುಕೊಳ್ಳುವುದಾಗಿ ತಿಳಿಸಿದರು..

ಬಸವ ಜಯ ಮೃತ್ಯುಂಜಯ ಶ್ರೀ
ಬಸವ ಜಯ ಮೃತ್ಯುಂಜಯ ಶ್ರೀ

By

Published : May 21, 2022, 7:43 PM IST

Updated : May 21, 2022, 8:04 PM IST

ಹಾವೇರಿ :2ಎ ಮೀಸಲಾತಿಗೆ ಆಗ್ರಹಿಸಿ ಮೇ 23ರಂದು ಹಾವೇರಿ ಜಿಲ್ಲೆ ಶಿಗ್ಗಾವಿಯ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಪ್ರತಿಭಟನೆ ದಿನಾಂಕ ಮುಂದೂಡಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಮಳೆ ನಿಂತ ನಂತರ ಮುಂದಿನ ದಿನಾಂಕ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಈಗ ರಾಜ್ಯದ ತಾಲೂಕುಗಳ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಇದೇ 23ರಂದು ರಾಜ್ಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಅದರಲ್ಲು ಸಿಎಂ ತವರು ಜಿಲ್ಲೆ ಹಾವೇರಿಯ ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಸಿಎಂ ಮನೆಮುಂದಿನ ಪ್ರತಿಭಟನೆ ಮುಂದೂಡಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಚುನಾವಣೆಗೆ ಮಠಾಧೀಶರು ಬೇಡ :ಮುಂದಿನ ಚುನಾವಣೆಯಲ್ಲಿ ಕೆಲ ಮಠಾಧೀಶರು ಸ್ಪರ್ಧಿಸುವ ಕುರಿತಂತೆ ಮಾತನಾಡಿದ ಅವರು, ಸ್ವಾಮೀಜಿಗಳು ನೇರವಾಗಿ ರಾಜಕಾರಣಕ್ಕೆ ಇಳಿಯುವುದು ತಪ್ಪು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ರಾಜಕಾರಣಿಗಳಿಗೆ ಮಠಾಧೀಶರು, ಧಾರ್ಮಿಕ ಮುಖಂಡರು ಮಾರ್ಗದರ್ಶನ ನೀಡಬೇಕೇ ಹೊರತು ನಾವೇ ಚುನಾವಣಿಗೆ ಇಳಿಯಬಾರದು.

ರಾಜ್ಯದಲ್ಲಿ ಪ್ರಜ್ಞಾವಂತ ಮತದಾರರಿದ್ದು, ಸ್ವಾಮೀಜಿಗಳಿಗೆ ಕಾಣಿಕೆ ನೀಡುತ್ತಾರೆ ಹೊರತು ಮತ ನೀಡುವುದಿಲ್ಲ. ಸ್ವಾಮೀಜಿಗಳು ಸಾಧ್ಯವಾದರೇ ರಾಜಕಾರಣಕ್ಕೆ ಧಾರ್ಮಿಕ ಸ್ಪರ್ಶ ನೀಡೋಣ ಎಂದು ತಿಳಿಸಿದರು.

2ಎ ಮೀಸಲಾತಿ ಹೋರಾಟದ ಕುರಿತಂತೆ ಬಸವ ಜಯ ಮೃತ್ಯುಂಜಯ ಶ್ರೀ ಮಾತನಾಡಿರುವುದು..

ಉತ್ತರಭಾರತದಲ್ಲಿ ಸ್ವಾಮೀಜಿಗಳೇ ಚುನಾವಣಿಗೆ ಇಳಿಯುತ್ತಾರೆ. ಆದರೆ, ಅಲ್ಲಿಯ ಮತದಾರರೇ ಬೇರೆ ನಮ್ಮ ರಾಜ್ಯದ ಮತದಾರರೇ ಬೇರೆ. ರಾಜ್ಯದಲ್ಲಿ ವೈಚಾರಿಕ ಮತದಾರರಿದ್ದು, ಸ್ವಾಮೀಜಿಗಳೇ ಚುನಾವಣಿಗೆ ನಿಂತ ಸಂದರ್ಭದಲ್ಲಿ ಸೋಲುಂಡ ಉದಾಹರಣಿಗಳು ನಮ್ಮ ಮುಂದಿವೆ ಎಂದರು.

ಇದೇ ವೇಳೆ ಪರೋಕ್ಷವಾಗಿ ಹರಿಹರಪೀಠದ ಸ್ವಾಮೀಜಿಗಳ ನಿಲುವಿನ ಬಗ್ಗೆ ಮಾತನಾಡಿದ ಶ್ರೀಗಳು, ಅವರು ಸುಖದ ಸುಪ್ಪತ್ತಿಗೆಯಲ್ಲಿದ್ದಾರೆ. ಸಮಾಜ ಕಷ್ಟದಲ್ಲಿದೆ. ಸಮಾಜ ಮಗುವಿದ್ದಂತೆ. ಮಗು ಅತ್ತಾಗ ತಾಯಿ ಸರ್ಕಾರ ಹಾಲುಣಿಸಬೇಕು. ಇಲ್ಲದಿದ್ದರೇ ಮಗು ಸಾಯುತ್ತೆ ಎಂದು ತಿಳಿಸಿದರು.

ತಮಗೆ ಕೂಡಲಸಂಗಮದ ಪಂಚಮಸಾಲಿ ಪೀಠ ಗೊತ್ತು. ನಂತರ ಕನಕಪೀಠ, ವಾಲ್ಮೀಕಿ ಪೀಠ ಮತ್ತು ಸಾಣೀಹಳ್ಳಿಪೀಠ ಮಾತ್ರ ಗೊತ್ತು ಬೇರೆ ಪೀಠದ ಬಗ್ಗೆ ಗೊತ್ತಿಲ್ಲಾ. ಈಗಾಗಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತಂತೆ ಪಾದಯಾತ್ರೆ ಹೋರಾಟ ನಡೆಸಿದ್ದೇವೆ. ಆದರೆ, ಮೀಸಲಾತಿ ನೀಡುವ ಭರವಸೆ ನೀಡಿದ್ದ ಆಗಿನ ಸಿಎಂ ಯಡಿಯೂರಪ್ಪ ಭರವಸೆ ಈಡೇರಿಸುವ ಮುನ್ನವೇ ಅಧಿಕಾರದಿಂದ ಕೆಳಗೆ ಇಳಿದರು.

ನಂತರ ಬಸವರಾಜ ಬೊಮ್ಮಾಯಿ ಸಿಎಂ ಆದರು. ಅವರು ಸಹ ಭರವಸೆ ನೀಡಿದ್ದರು. ಆದರೆ, ಅವರು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಕಳೆದ ಎರಡು ತಿಂಗಳಿಂದ ಬೊಮ್ಮಾಯಿ ಮೌನವಾಗಿದ್ದಾರೆ. ಇದೇ ರೀತಿ ತಮ್ಮ ಬಗ್ಗೆ ನಿರ್ಲಕ್ಷ್ಯವಹಿಸಿದರೆ ವಾಲ್ಮೀಕಿ ಶ್ರೀಗಳಂತೆ ತಾವು ಕೂಡ ಪ್ರತಿಭಟನೆಗೆ ಕುಳಿತುಕೊಳ್ಳುವುದಾಗಿ ತಿಳಿಸಿದರು.

(ಇದನ್ನೂ ಓದಿ: ಪಂಚಮಸಾಲಿ ಸಮುದಾಯದ 2-ಎ ಮೀಸಲಾತಿ ಬೇಡಿಕೆ ಬಗ್ಗೆ ವರದಿ ನೀಡಿ: ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ)

Last Updated : May 21, 2022, 8:04 PM IST

ABOUT THE AUTHOR

...view details