ಕರ್ನಾಟಕ

karnataka

ETV Bharat / state

ಮಕ್ಕಳಿಂದ ನೊಂದ ಪೋಷಕರ ನೆರವಿಗೆ ನಿಂತ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯ - ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯ

ಹಾವೇರಿ ಜಿಲ್ಲೆಯ ಹಾನಗಲ್​ ತಾಲೂಕಿನಲ್ಲಿ ತಮ್ಮ ಪೋಷಕರಿಂದ ಆಸ್ತಿಯನ್ನು ಕಿತ್ತುಕೊಂಡು ಅವರನ್ನು ಬೀದಿಪಾಲು ಮಾಡಿದ ಮಕ್ಕಳಿಗೆ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯ ತಕ್ಕ ಪಾಠ ಕಲಿಸಲು ಮುಂದಾಗಿದೆ. ಈ ಮೂಲಕ ನೊಂದ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ.

ಮಕ್ಕಳಿಂದ ನೊಂದ ಪೋಷಕರ ನೆರವಿಗೆ ನಿಂತ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯ
Savanur Sub Divisional Court to help parents who were hurt by children

By

Published : Feb 6, 2021, 11:34 AM IST

ಹಾವೇರಿ:ಮಕ್ಕಳನ್ನು ಪೋಷಿಸಿ ದೊಡ್ಡವರನ್ನಾಗಿ ಮಾಡುವ ಪೋಷಕರು ಕೊನೆಗಾಲದಲ್ಲಿ ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸ ಹೊಂದಿರುತ್ತಾರೆ. ಆದರೆ ಮಕ್ಕಳು ಮಾತ್ರ ಪೋಷಕರ ಬಳಿಯಿರುವ ಆಸ್ತಿಯನ್ನು ಪಡೆದು ಅವರನ್ನು ಬೀದಿಪಾಲು ಮಾಡುತ್ತಾರೆ. ಇದಕ್ಕೆಲ್ಲ ಅಂತ್ಯ ಹಾಡಲೆಂದು ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯ ಮುಂದಾಗಿದ್ದು, ನೊಂದ ಪೋಷಕರಿಗೆ ನ್ಯಾಯ ಒದಗಿಸಿ ಅವರ ಮಕ್ಕಳಿಗೆ ತಕ್ಕ ಪಾಠ ಕಲಿಸುತ್ತಿದೆ.

ಮಕ್ಕಳಿಂದ ನೊಂದ ಪೋಷಕರ ನೆರವಿಗೆ ನಿಂತ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯ

ಜಿಲ್ಲೆಯ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟಿ ನಿವಾಸಿ ಫಕ್ಕೀರವ್ವ ಎಂಬುವರಿಗೆ ಎಂಟು ಜನ ಗಂಡು ಮಕ್ಕಳು. ಇವರ ನಾಲ್ಕನೇಯ ಮಗ ಚನ್ನಬಸಪ್ಪ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ಅವರ ಮನೆಯಲ್ಲಿ ವಾಸಿಸುತ್ತಿದ್ದಳು. ಆದರೆ ಮಗ ತಾಯಿಯಿಂದ ಆಸ್ಪತ್ರೆ ನೆಪವೊಡ್ಡಿ ಆಸ್ತಿ ಬರೆಸಿಕೊಂಡು 90 ವರ್ಷದ ಫಕ್ಕೀರವ್ವಳ್ಳನ್ನು ಮನೆಯಿಂದ ಹೊರ ಹಾಕಿದ್ದನು. ಈ ಸಮಯದಲ್ಲಿ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯ ಫಕ್ಕೀರವ್ವಳ ನೆರವಿಗೆ ಬಂದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡು ಫಕ್ಕೀರವ್ವಳಿಗೆ ಮಗನಿಂದ ಆಸ್ತಿ ಮರಳಿ ಕೊಡಿಸಿದೆ.

ನೊಂದ ಪೋಷಕರ ನರೆವಿಗೆ ನಿಂತ ಉಪವಿಭಾಗಾಧಿಕಾರಿ ನ್ಯಾಯಾಲಯದ ಅಧಿಕಾರಿಗಳು

ಹಾನಗಲ್ ತಾಲೂಕಿನ ಚಿಕ್ಕಾಂಶಿ ಹೊಸೂರಿನಲ್ಲೂ ಅಂತಹದ್ದೇ ಪ್ರಕರಣ ನಡೆದಿದೆ. ಇಲ್ಲಿ ರತ್ನವ್ವ ಎಂಬುವರು ಗಂಡು ಮಕ್ಕಳಿಲ್ಲದ ಕಾರಣ ತಮ್ಮ ಹಿರಿಯ ಮಗಳ ಹಿರಿಯ ಮಗನನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಳು. ಆದರೆ ಮೊಮ್ಮಗ ಅಜ್ಜಿಯಿಂದ ಆಸ್ತಿಯನ್ನು ಬರೆಸಿಕೊಂಡು ಕಿರುಕುಳ ನೀಡಲಾರಂಭಿಸಿದ್ದನು. ಇದರಿಂದ ಬೇಸತ್ತ ರತ್ನವ್ವ ಸವಣೂರು ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯ ಮೊಮ್ಮಗನಿಂದ ಆಸ್ತಿ ವಾಪಸ್​ ದೊರಕಿಸಿ ಕೊಟ್ಟಿದೆ.

ಓದಿ: ಕಲಘಟಗಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ: ಪೊಲೀಸರಿಂದ ತೀವ್ರ ವಿಚಾರಣೆ

ಹಾನಗಲ್ ತಾಲೂಕಿನಲ್ಲಿ ಕಂಡು ಬಂದಂತಹ ಇಂತಹ ಪ್ರಕರಣಗಳಲ್ಲಿ ಮಕ್ಕಳಿಂದ ತಾಯಂದಿರಿಗೆ ಆಸ್ತಿ ಮರಳಿಸಿದ್ದೇವೆ. ಪೋಷಕರಿಂದ ಆಸ್ತಿ ಪಡೆದು ನಂತರ ಅವರಿಗೆ ಮಕ್ಕಳು ಕಿರುಕುಳ ನೀಡುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ತಾಯಂದಿರು ಭಯ ಪಡಬೇಕಾಗಿಲ್ಲ. ಬದಲಿಗೆ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರೆ ಸಾಕು ಕೆಲವೆ ದಿನಗಳಲ್ಲಿ ಆಸ್ತಿ ವಾಪಸ್ ಸಿಗಲಿದೆ ಎಂದು ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ್ ಅಭಯ ನೀಡಿದ್ದಾರೆ.

ABOUT THE AUTHOR

...view details