ಕರ್ನಾಟಕ

karnataka

ETV Bharat / state

ಉಕ್ರೇನ್​ನಿಂದ ಹಿಂದಿರುಗಿದ ರಾಣೆಬೆನ್ನೂರು ವಿದ್ಯಾರ್ಥಿ: ನವೀನ್​ ಸಾವಿನ ಕುರಿತು ಮಾಹಿತಿ ಬಿಚ್ಚಿಟ್ಟ ಜೂನಿಯರ್​ - Ranebennur Students Return From Ukraine

ಉಕ್ರೇನ್​ನಿಂದ ರಾಣೆಬೆನ್ನೂರಿನ ಎಂಬಿಬಿಎಸ್​ ವಿದ್ಯಾರ್ಥಿ ಮನೆಗೆ ಹಿಂದಿರುಗಿದ್ದಾನೆ. ಮಗನನ್ನು ಕಂಡು ಪೋಷಕರು ಅಪ್ಪಿಕೊಂಡು ಆನಂದಭಾಷ್ಪ ಸುರಿಸಿದರು. ಈ ವೇಳೆ ತಹಶೀಲ್ದಾರ್​ ಅವರು ಹಾರ ಹಾಕಿ ಯುವಕನನ್ನು ಸ್ವಾಗತಿಸಿದರು.

Ranebennur Students Return From Ukraine
ಉಕ್ರೇನ್​ನಿಂದ ಹಿಂದಿರುಗಿದ ರಾಣೇಬೆನ್ನೂರು ವಿದ್ಯಾರ್ಥಿ

By

Published : Mar 6, 2022, 3:44 PM IST

ಹಾವೇರಿ:ಉಕ್ರೇನ್​​ನಲ್ಲಿ ಸಿಲುಕಿದ್ದ ಜಿಲ್ಲೆಯ ರಾಣೆಬೆನ್ನೂರು ನಗರದ ನಿವಾಸಿ ಎಂಬಿಬಿಎಸ್​ ವಿದ್ಯಾರ್ಥಿ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದು, ಕುಟುಂಬಸ್ಥರು ಹೂಮಾಲೆ ಹಾಕಿ, ಹಿಸಿ ತಿನ್ನಿಸಿ ಸ್ವಾಗತಿಸಿದರು.

ಉಕ್ರೇನ್​ನಿಂದ ಹಿಂದಿರುಗಿದ ರಾಣೆಬೆನ್ನೂರು ವಿದ್ಯಾರ್ಥಿ

ರಾಣೇಬೆನ್ನೂರು ನಗರದ ನಿವಾಸಿ ಗಣೇಶ ಶಿವಲಿಂಗಪ್ಪನವರ ಉಕ್ರೇನ್​ನಲ್ಲಿ ಮೊದಲ ವರ್ಷದ ಎಂಬಿಬಿಎಸ್​​ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ ಇದ್ದು, ಅಲ್ಲಿದ್ದ ಭಾರತೀಯರು ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ದೇಶಗಳಿಗೆ ವಾಪಸಾಗುತ್ತಿದ್ದಾರೆ. ಅದರಂತೆ ಇಂದು ಸುರಕ್ಷಿತವಾಗಿ ಬಂದ ಯುವಕನನ್ನು ಕುಟುಂಬಸ್ಥರು ಹಾಗೂ ತಹಶೀಲ್ದಾರ್​ ಶಂಕರ್​​ ಅವರು ಸ್ವಾಗತಿಸಿದರು.

ನಾವೆಲ್ಲ ಮೆಟ್ರೋದಲ್ಲಿದ್ದೆವು. ಕರ್ಫ್ಯೂ ಮುಗಿದ ಕೂಡಲೇ ಮಾರ್ಕೆಟ್​ಗೆ ಹೋಗಿ ಬರುತ್ತಿದ್ದೆವು‌. ಸೈರನ್ ಸೌಂಡ್ ಕೇಳ್ತಿದ್ದಂತೆ ಓಡಿ ಬಂದು ಬಂಕರ್, ಮೆಟ್ರೋ ಸೇರುತ್ತಿದ್ದೆವು. ಅಪ್ಪ-ಅಮ್ಮನಿಗೆ ಕರೆ ಮಾಡಿ ನಾವೆಲ್ಲ ಸುರಕ್ಷಿತವಾಗಿದ್ದು, ಭಯ ಪಡಬೇಡಿ ಡಂದು ಧೈರ್ಯ ತುಂಬುತ್ತಿದ್ದೆ ಎಂದು ವಿದ್ಯಾರ್ಥಿ ಗಣೇಶ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.

ನವೀನಣ್ಣ ನಮ್ಮ ಸೀನಿಯರ್, ನವೀನ್​ ಸಾವಿನ ಹಿಂದಿನ ದಿನ ಸೀನಿಯರ್ ಎಲ್ಲರೂ ಸೇರಿ ಅಲ್ಲಿಂದ ಹೇಗೆ ಊರಿಗೆ ಹೋಗಬೇಕು ಎಂಬುದರ ಬಗ್ಗೆ ಪ್ಲಾನ್ ಮಾಡಿದ್ರು‌. ಆದರೆ ಅಣ್ಣ ಶಾಪಿಂಗ್​ಗೆ ಕ್ಯೂನಲ್ಲಿ ನಿಂತಿದ್ದ. ಆಗ ಶೆಲ್ ದಾಳಿಗೆ ಬಲಿಯಾದ‌ ಎಂದು ನವೀನ್​ ಸಾವಿನ ಕುರಿತಂತೆ ಮಾಹಿತಿ ನೀಡಿದನು.

ಇದನ್ನೂ ಓದಿ: ತುಮಕೂರು: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ

For All Latest Updates

TAGGED:

ABOUT THE AUTHOR

...view details