ರಾಣೆಬೆನ್ನೂರು:ಮೂರ್ಛೆ ರೋಗದಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿಗೆ ಶಾಸಕ ಅರುಣಕುಮಾರ ಪೂಜಾರ ಮತ್ತು ಅಧಿಕಾರಿಗಳು ಔಷಧಿ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ರಂಗನಾಥ ನಗರದ ಜ್ಯೋತಿ ಮಡಿವಾಳರ ಮೂರು ವರ್ಷದ ಕಂದಮ್ಮ ಮೂರ್ಛೆ ರೋಗದಿಂದ ಬಳಲುತ್ತಿತ್ತು. ಈ ರೋಗಕ್ಕೆ ಥೈಮನಿ ಹೈಡ್ರಕ್ಲೋರಡಿಕ್ ಸಿರಪ್ ಬೇಕಿತ್ತು, ಆದ್ರೆ ಲಾಕ್ಡೌನ್ ಹಿನ್ನೆಲೆ ಔಷಧಿ ರಾಣೆಬೆನ್ನೂರಿನಲ್ಲಿ ಸಿಕ್ಕಿರಲಿಲ್ಲ. ಇದರಿಂದ ಮಗುವಿನ ಆರೋಗ್ಯ ಹದಗೆಟ್ಟಿತ್ತು. ಈ ಔಷಧಿಯನ್ನು ಮಣಿಪಾಲ್ನಿಂದ ತರಸಿಕೊಡಬೇಕು ಎಂದು ಕಂದಮ್ಮನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಂಡಿದ್ದರು.
ಮೂರು ವರ್ಷದ ಮಗುವಿಗೆ ಔಷಧಿ ಒದಗಿಸಿದ ಶಾಸಕರು... - ರಂಗನಾಥ ನಗರದ ಜ್ಯೋತಿ ಮಡಿವಾಳರ ಮೂರು ವರ್ಷದ ಕಂದಮ್ಮ
ರಾಣೆಬೆನ್ನೂರು ತಾಲೂಕಿನ ರಂಗನಾಥ ನಗರದ ಜ್ಯೋತಿ ಮಡಿವಾಳರ ಮೂರು ವರ್ಷದ ಕಂದಮ್ಮ ಮೂರ್ಛೆ ರೋಗದಿಂದ ಬಳಲುತ್ತಿದ್ದರಿಂದ ಶಾಸಕ ಅರುಣಕುಮಾರ ಪೂಜಾರ ಮತ್ತು ಅಧಿಕಾರಿಗಳು ಔಷಧಿ ತಂದು ಕೊಟ್ಟು ಯಶಸ್ವಿಯಾಗಿದ್ದಾರೆ.
ಮೂರು ವರ್ಷದ ಮಗುವಿಗೆ ಔಷಧಿ ಒದಗಿಸಿಕೊಟ್ಟ ಶಾಸಕರು
ಇದನ್ನು ಗಮನಿಸಿದ ಶಾಸಕರು ಮತ್ತು ಅಧಿಕಾರಿಗಳು ಮಣಿಪಾಲ್ ನ ಕಸ್ತೂರಬಾ ಆಸ್ಪತ್ರೆಯಿಂದ ಔಷಧಿ ತರಿಸಿಕೊಡುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ.
TAGGED:
ಶಾಸಕ ಅರುಣಕುಮಾರ ಪೂಜಾರ