ಕರ್ನಾಟಕ

karnataka

ETV Bharat / state

ಕೆರೆಯಂತಾದ ರೈಲ್ವೆ ಕೆಳಸೇತುವೆ ಕಾಮಗಾರಿ ವಿರೋಧಿಸಿ ನ.4ಕ್ಕೆ ರೈಲು ತಡೆ ಎಚ್ಚರಿಕೆ - Haveri latest news

ಅವೈಜ್ಞಾನಿಕ ರೈಲ್ವೆ ಕೇಳಸೇತುವೆ ಕಾಮಗಾರಿ ಮತ್ತು ಕಾಮಗಾರಿ ವಿಳಂಬ ಖಂಡಿಸಿ ನವೆಂಬರ್​ 4ರಂದು ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ಪ್ರತಿಭಟನೆ ನಡೆಸಲಿದೆ.

protest-against-railway-department

By

Published : Oct 15, 2019, 5:36 PM IST

ಹಾವೇರಿ: ಹೊನ್ನತ್ತಿ- ರಾಣೆಬೆನ್ನೂರು ರಾಜ್ಯ ಹೆದ್ದಾರಿ ನಡುವೆ ನಿರ್ಮಿಸುತ್ತಿರುವ ರೈಲ್ವೆ ಕೇಳಸೇತುವೆ ಕಾಮಗಾರಿ ವಿರೋಧಿಸಿ ನ.4ರಂದು ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಸದಸ್ಯರು ರೈಲು ತಡೆ ನಡೆಸಲಿದ್ದಾರೆ.

ಸಮಿತಿ ಅಧ್ಯಕ್ಷ ರವಿಂದ್ರಗೌಡ ಪಾಟೀಲ್​, ರಾಣೆಬೆನ್ನೂರಿನಲ್ಲಿ ಇರುವ ಮೂರು ರೈಲು ಗೇಟ್​ಗಳು ಹಲವಾರು ಹಳ್ಳಿಗಳಿಗೆ ಸಂಪರ್ಕಿಸುತ್ತವೆ. ಇದರಲ್ಲಿ ಗಂಗಾಪುರ ಗೇಟ್ (ಗೇಟ್​ ಸಂಖ್ಯೆ 218), ಮೆಡ್ಲರಿ ಗೇಟ್​​ಗಳನ್ನು (ಗೇಟ್​ ಸಂಖ್ಯೆ 217) ಮುಚ್ಚಲಾಗಿದೆ. ಅಲ್ಲದೇ, ಇರುವ ದೇವರಗುಡ್ಡ ಗೇಟ್​ಗೆ ಅವೈಜ್ಞಾನಿಕವಾಗಿ ಕೇಳಸೇತುವೆ ನಿರ್ಮಿಸಲಾಗುತ್ತಿದೆ.

ಕೆರೆಯಂತಾದ ರೈಲ್ವೆ ಕೆಳಸೇತುವೆ

ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ಸೇತುವೆ ಕೆಳಗಡೆ ನೀರು ನಿಂತು ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಅನೇಕ ಹೋರಾಟಗಳು ನಡೆದಿದ್ದರೂ ಜನಪ್ರತಿನಿಧಿಗಳು ಪ್ರತಿಕ್ರಿಯಿಸಿಲ್ಲ. ಕೆಳಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮಳೆ ನೀರು ನಿಂತು ಕೆರೆಯಂತಾಗಿದೆ. ಈ ಸಮಸ್ಯೆಯಿಂದಾಗಿ ವಿವಿಧ ಗ್ರಾಮಗಳಿಗೆ ಜನರು ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ರೈಲು ತಡೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details