ಕರ್ನಾಟಕ

karnataka

ETV Bharat / state

ರೈತರನ್ನು ಕಳ್ಳರೆಂದು ಕರೆದ ಆರೋಪ... ಜಿ. ಪಂ. ಸದಸ್ಯನ ವಿರುದ್ಧ ಪ್ರತಿಭಟನೆ - Kannada news

ಪೈಪ್​ಲೈನ್​ ಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರನ್ನು ಕಳ್ಳರು ಎಂದು ಕರೆದ ಆರೋಪದ ಮೇಲೆ ಜಿಲ್ಲಾ ಪಂಚಾಯತ್ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ವಿರುದ್ಧ ಕನವಳ್ಳಿ ಗ್ರಾಮಸ್ಥರು ಕಿಡಿಕಾರಿದ್ದಾರೆ. ಅಲ್ಲದೆ, ಜಿ.ಪಂ ಸದಸ್ಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಪ್ರತಿಭಟನೆ ಸಹ ನಡೆಸಿದರು.

ರೈತರನ್ನು ಕಳ್ಳರೆಂದು ಜರಿದ ಜಿಲ್ಲಾ ಪಂಚಾಯತ್ ಸದಸ್ಯನ ವಿರುದ್ಧ ಪ್ರತಿಭಟನೆ

By

Published : Jun 11, 2019, 8:14 PM IST

ಹಾವೇರಿ:ಜಿಲ್ಲಾ ಪಂಚಾಯತ್ ಪೈಪ್ ಸಾಗಣಿಕ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಜಿ. ಪಂ. ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅವರು ಕನವಳ್ಳಿ ರೈತರನ್ನ ಕಳ್ಳರು ಎಂದು ಕರೆದಿದ್ದಾರೆ ಎಂದು ಆರೋಪಿಸಿ ನಗರದಲ್ಲಿಂದು ಕನವಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯತ್ ಹಳೇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕನವಳ್ಳಿ ಕೆರೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ನೀರು ಒದಗಿಸುತ್ತದೆ. ಇಲ್ಲಿ ನೀರಿನ ಸಮಸ್ಯೆ ಇರುವುದರಿಂದ ನಾವು ಶಾಸಕರಿಗೆ ಮನವಿ ಸಲ್ಲಿಸಿದ್ದೆವು. ಅದರಂತೆ ಶಾಸಕರು ಜಿಲ್ಲಾ ಪಂಚಾಯತ್ ಅಧಿಕಾರಿಗಳ ಜೊತೆ ಚರ್ಚಿಸಿ ಪೈಪ್ ನೀಡಿದ್ದಾರೆ.

ರೈತರನ್ನು ಕಳ್ಳರೆಂದು ಕರೆದ ಜಿಲ್ಲಾ ಪಂಚಾಯತ್ ಸದಸ್ಯನ ವಿರುದ್ಧ ಪ್ರತಿಭಟನೆ

ಆದರೆ, ಅದೇ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಇದೊಂದು ಕಳ್ಳತನ ಎಂದು ಆರೋಪಿಸಿರುವುದು ತಮಗೆ ನೋವು ತಂದಿದೆ ಎಂದು ಗ್ರಾಮಸ್ಥರು ಹೇಳಿದರು. ಈ ಕೂಡಲೇ ಕೊಟ್ರೇಶಪ್ಪ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕ್ಷಮೆ ಕೇಳುವವರೆಗೂ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದರು.

ABOUT THE AUTHOR

...view details