ಹಾವೇರಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿರುವ ವಿಧಾನಸಭಾ ಕ್ಷೇತ್ರ ರಾಣೆಬೆನ್ನೂರು. 2008ರಲ್ಲಿ ಇಲ್ಲಿ ಬಿಜೆಪಿಯ ಶಿವಣ್ಣ ಗೌಡಶಿವಣ್ಣನವರ್ ಶಾಸಕರಾಗಿದ್ದರು. 2013ರಲ್ಲಿ ಕಾಂಗ್ರೆಸ್ನ ಕೆ.ಬಿ.ಕೋಳಿವಾಡ್ ಶಾಸಕರಾಗಿ ಅಯ್ಕೆಯಾಗಿದ್ದರು. 2018ರಲ್ಲಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆರ್.ಶಂಕರ್ ಶಾಸಕರಾದರು. ಆರ್.ಶಂಕರ್ ಶಾಸಕ ಸ್ಥಾನದಿಂದ ಅನರ್ಹರಾದ ಕಾರಣ 2019ರಲ್ಲಿ ರಾಣೆಬೆನ್ನೂರಿಗೆ ಉಪಚುನಾವಣೆ ಎದುರಾಗಿತ್ತು.
ಉಪಚುನಾವಣೆಯಲ್ಲಿ ಬಿಜೆಪಿ ಅರುಣಕುಮಾರ್‌ಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಕೆ.ಬಿ.ಕೋಳಿವಾಡ್‌ರನ್ನು ಕಣಕ್ಕಿಳಿಸಿತ್ತು. ಭಾರಿ ಪೈಪೋಟಿಯಿಂದ ನಡೆದ ಉಪಚುನಾವಣೆಯಲ್ಲಿ ಅರುಣಕುಮಾರ್ ಗೆದ್ದು ಬೀಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಅರುಣಕುಮಾರ್, ಕಾಂಗ್ರೆಸ್‌ನಿಂದ ಪ್ರಕಾಶ್ ಕೋಳಿವಾಡ್, ಜೆಡಿಎಸ್‌ನಿಂದ ಮಂಜುನಾಥ ಗೌಡಶಿವಣ್ಣನವರ್, ಎನ್‌ಸಿಪಿಯಿಂದ ಆರ್.ಶಂಕರ್ ಮತ್ತು ಪಕ್ಷೇತರರಾಗಿ ಸಂತೋಷ ಪಾಟೀಲ್ ಅಖಾಡದಲ್ಲಿದ್ದಾರೆ.
ಕ್ಷೇತ್ರ ವಿಶ್ಲೇಷಣೆ:ರಾಣೆಬೆನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು. ಇಲ್ಲಿಂದಲೇ ಉತ್ತರ ಕರ್ನಾಟಕ ಆರಂಭವಾಗುತ್ತೆ. ಏಷ್ಯಾ ಖಂಡದಲ್ಲಿ ಅತಿಹೆಚ್ಚು ಕಾರ್ಖಾನೆಗಳಿರುವ ತಾಲೂಕು ಕೂಡಾ ಇದೇ ರಾಣೆಬೆನ್ನೂರು. ರಾಣೆಬೆನ್ನೂರನ್ನು ಏಷ್ಯಾ ಖಂಡದ ಬೀಜೋತ್ಪಾದನೆಯ ಬಟ್ಟಲು ಎಂದೂ ಕರೆಯಲಾಗುತ್ತದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಾಣಿಜ್ಯ ಕೇಂದ್ರೀಕೃತ ತಾಲೂಕು ರಾಣೆಬೆನ್ನೂರು. ಇಲ್ಲಿ ಹೆಳವನಕಟ್ಟಿ ಗಿರಿಯಮ್ಮ, ಹಾನಗಲ್ ಕುಮಾರೇಶ್ವರ ಜನಿಸಿದ್ದು ರಾಣೆಬೆನ್ನೂರಿನ ಜೋಯಿಸಿರಹರಳಹಳ್ಳಿಯಲ್ಲಿ. ಈ ತಾಲೂಕಿನಿಂದಲೇ ವೀರಶೈವ ಪಂಚಪೀಠಗಳಿಗೆ ಇಬ್ಬರು ಮಠಾಧಿಪತಿಯಾಗಿದ್ದಾರೆ. ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸುಭೀಕ್ಷೆಯಲ್ಲಿರುವ ಕ್ಷೇತ್ರ ರಾಣೆಬೆನ್ನೂರು.
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ:
ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ - 2,35,074