ಕರ್ನಾಟಕ

karnataka

ETV Bharat / state

ಕಾರ್ಗಿಲ್ ಜಯಸಿ ಬಂದಾಗ ನೀಡುತ್ತೇವೆ ಎಂದಿದ್ದ ಜಮೀನು ಇನ್ನೂ ಸಿಕ್ಕಿಲ್ಲ : ಹಾವೇರಿಯ ಯೋಧ - 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧ

1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ವಿಜಯಶಾಲಿಯಾಗಿದ್ದು ಈಗ ಇತಿಹಾಸ. ಇಂತಹ ಯುದ್ದದಲ್ಲಿ ಪಾಲ್ಗೊಂಡು ಹಾವೇರಿ ಜಿಲ್ಲೆಗೆ ಹೆಸರು ತಂದವರು ಮಹ್ಮದ್ ಖವಾಸ್ ಜಹಾಂಗೀರ್. ಕಾರ್ಗಿಲ್ ಯುದ್ಧ ಮುಗಿಸಿ ಬಂದಿದ್ದ ಜಹಾಂಗೀರ್‌ಗೆ ಸರ್ಕಾರ ಜಮೀನು ನೀಡುವ ಭರವಸೆ ನೀಡಿತ್ತು. ಆದರೆ ಭರವಸೆ ನೀಡಿ ಎರಡು ದಶಕಗಳೇ ಗತಿಸಿವೆ, ಇನ್ನೂ ಜಮೀನು ಮಾತ್ರ ಸಿಕ್ಕಿಲ್ಲ.

Kargil Vijaydiwas news ಕಾರ್ಗಿಲ್ ವಿಜಯೋತ್ಸವ ಆಚರಣೆ
ಹಾವೇರಿಯ ಯೋಧ

By

Published : Jul 25, 2020, 11:49 PM IST

ಹಾವೇರಿ:1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ವೀರಸೇನಾನಿ ಹಾವೇರಿಯ ಮಹ್ಮದ ಖವಾಸ್ ಜಹಾಂಗೀರ್. ಅಂದು ಯುದ್ಧದಲ್ಲಿ ಪಾಲ್ಗೊಂಡು ಸಾಹಸ ಮೆರೆದಿದ್ದ, ಇವರಿಗೆ ಈಗ ಹಾವೇರಿ ಜಿಲ್ಲಾಡಳಿತದ ಎದುರು ಸೆಣಸಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಗಿಲ್ ಜಯಸಿ ಬಂದಾಗ ನೀಡುತ್ತೇವೆ ಎಂದಿದ್ದ ಜಮೀನು ಇನ್ನೂ ಸಿಕ್ಕಿಲ್ಲ. ಪ್ರತಿವರ್ಷ ವಿಜಯ್ ದಿವಸ್ ಬರುತ್ತಿದ್ದಂತೆ ಸಂಘ-ಸಂಸ್ಥೆಗಳು ಕರೆದು ಸನ್ಮಾನ ಮಾಡುತ್ತವೆ. ಆದರೆ ಜಿಲ್ಲಾಡಳಿತ ಮಾತ್ರ ತನಗೆ ಜಮೀನು ನೀಡುತ್ತಿಲ್ಲ ಎಂದು ಕಾರ್ಗಿಲ್ ಯೋಧ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ವೀರಸೇನಾನಿ ಹಾವೇರಿಯ ಮಹ್ಮದ ಖವಾಸ್ ಜಹಾಂಗೀರ್

1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ವಿಜಯಶಾಲಿಯಾಗಿದ್ದು ಈಗ ಇತಿಹಾಸ. ಇಂತಹ ಯುದ್ದದಲ್ಲಿ ಪಾಲ್ಗೊಂಡು ಹಾವೇರಿ ಜಿಲ್ಲೆಗೆ ಹೆಸರು ತಂದವರು ಮಹ್ಮದ್ ಖವಾಸ್ ಜಹಾಂಗೀರ್. ಕಾರ್ಗಿಲ್ ಯುದ್ಧ ಮುಗಿಸಿ ಬಂದಿದ್ದ ಜಹಾಂಗೀರ್‌ಗೆ ಸರ್ಕಾರ ಜಮೀನು ನೀಡುವ ಭರವಸೆ ನೀಡಿತ್ತು. ಆದರೆ ಭರವಸೆ ನೀಡಿ ಎರಡು ದಶಕಗಳೇ ಗತಿಸಿವೆ, ಇನ್ನೂ ಜಮೀನು ಮಾತ್ರ ಸಿಕ್ಕಿಲ್ಲ.

ಕಳೆದ 20 ವರ್ಷಗಳಿಂದ ಕಚೇರಿಗೆ ಅಲೆದು ಖವಾಸ್ ಭೂಮಿ ಆಸೆಯನ್ನೇ ಬಿಟ್ಟಿದ್ದಾರೆ. ಹಲವು ಬಾರಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ABOUT THE AUTHOR

...view details