ಕರ್ನಾಟಕ

karnataka

ETV Bharat / state

ಕಾರ್​​ ಮೇಲೆ ಪ್ರೆಸ್ ಸ್ಟಿಕ್ಕರ್ ಅಂಟಿಸಿ ಗಾರೆ ಕೆಲಸಕ್ಕೆ ಹೊರಟರು..

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರೆಸ್ ಎಂದು ಬರೆದಿದ್ದ ಕಾರಿನಲ್ಲಿ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಐವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೇರೆ ಜಿಲ್ಲೆಯಲ್ಲಿ ಪೊಲೀಸ್ ಕಾನ್​​ಸ್ಟೇಬಲ್ ಆಗಿದ್ದ ವ್ಯಕ್ತಿಯ ಸಂಬಂಧಿಯೋರ್ವ ತನ್ನ ಬೈಕ್ ಮೇಲೆ ಪೊಲೀಸ್ ಎಂದು ಬರೆಸಿದ್ದ..

press-sticker-paste-mortar-car-siege-in-haveri
ಕಾರ್​​ ಮೇಲೆ ಪ್ರೆಸ್ ಸ್ಟಿಕ್ಕರ್

By

Published : Jun 4, 2021, 9:28 PM IST

ಹಾವೇರಿ :ಪ್ರಸ್ತುತ ರಾಜ್ಯದಲ್ಲಿ ಲಾಕ್​​ಡೌನ್ ಜಾರಿಯಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವಾಹನ ಸಂಚಾರ ನಿಷೇಧವಿದೆ. ಅಲ್ಲದೆ ಜಿಲ್ಲಾಡಳಿತ ನಿಗದಿಪಡಿಸಿದ ವೇಳೆ ಮತ್ತು ದಿನದಂದು ಮಾತ್ರ ಸಾರ್ವಜನಿಕರಿಗೆ ಓಡಾಡಲು ಅನುಮತಿ ನೀಡಲಾಗಿದೆ. ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಮೇಲೆ ಪೊಲೀಸರು ಕಾನೂನು ಕ್ರಮಕೈಗೊಳ್ಳುತ್ತಿದ್ದಾರೆ.

ಕಾರ್​​ ಮೇಲೆ ಪ್ರೆಸ್ ಸ್ಟಿಕ್ಕರ್

ಓದಿ: ಮತ್ತೊಬ್ಬನ ಜತೆ ಪ್ರೇಯಸಿ ಡೇಟಿಂಗ್, ಸ್ನೇಹಿತನನ್ನೇ ಹತ್ಯೆಗೈದ ಪ್ರಿಯತಮ..!

ಲಾಕ್​​ಡೌನ್ ಇದ್ದರೂ, ಕೆಲವರು ತಮ್ಮ ವಾಹನಗಳ ಮೇಲೆ ಪೊಲೀಸ್ ಮತ್ತು ಪ್ರೆಸ್ ಎಂದು ಬರೆಸಿಕೊಂಡು ಅನಗತ್ಯ ತಿರುಗಾಡುತ್ತಿದ್ದಾರೆ. ಇಂತಹ ವಾಹನಗಳನ್ನು ಪೊಲೀಸರು ಸೀಜ್ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರೆಸ್ ಎಂದು ಬರೆದಿದ್ದ ಕಾರಿನಲ್ಲಿ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಐವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೇರೆ ಜಿಲ್ಲೆಯಲ್ಲಿ ಪೊಲೀಸ್ ಕಾನ್​​ಸ್ಟೇಬಲ್ ಆಗಿದ್ದ ವ್ಯಕ್ತಿಯ ಸಂಬಂಧಿಯೋರ್ವ ತನ್ನ ಬೈಕ್ ಮೇಲೆ ಪೊಲೀಸ್ ಎಂದು ಬರೆಸಿದ್ದ.

ಆದರೆ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿದ್ದ ಹಾವೇರಿ ಸಿಪಿಐ ಪ್ರಲ್ಹಾದ್ ಚೆನ್ನಗಿರಿ ಮತ್ತು ಸಂತೋಷ್ ಪವಾರ್ ಬೈಕ್ ಸವಾರನ ವಿಚಾರಣೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಕಾರು ಮತ್ತು ಬೈಕ್‌ನ ಪೊಲೀಸರು ಸೀಜ್ ಮಾಡಿದ್ದಾರೆ.

ABOUT THE AUTHOR

...view details