ಹಾವೇರಿ: ರೈತರ ಜಮೀನುಗಳಿಗೆ ನುಗ್ಗಿ ಉಪಟಳ ನೀಡುತ್ತಿವೆ ಎಂದು ಸುಮಾರು 200ಕ್ಕೂ ಅಧಿಕ ಹಂದಿಗಳನ್ನು ಗುಂಡಿಯಲ್ಲಿ ಮುಚ್ಚಿ ಜೀವಂತ ಸಮಾಧಿ ಮಾಡಿರುವ ಘಟನೆ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ.
ಹಿರೇಕೆರೂರಲ್ಲಿ 200 ಕ್ಕೂ ಹೆಚ್ಚು ಹಂದಿಗಳ ಜೀವಂತ ಸಮಾಧಿ... ಕಾರಣ? - haveri
ರೈತರ ಜಮೀನುಗಳಿಗೆ ನುಗ್ಗಿ ಉಪಟಳ ನೀಡುತ್ತಿವೆ ಎಂದು ಆರೋಪಿಸಿ ಸುಮಾರು 200ಕ್ಕೂ ಅಧಿಕ ಹಂದಿಗಳನ್ನು ಗುಂಡಿಯಲ್ಲಿ ಮುಚ್ಚಿ ಕೊಂದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಂದಿಗಳನ್ನು ಜೀವಂತವಾಗಿ ಗುಂಡಿಯಲ್ಲಿ ಮುಚ್ಚಿದ ಸಿಬ್ಬಂದಿ
ಹಿರೇಕೆರೂರು ಪಟ್ಟಣ ಪಂಚಾಯಿತಿಯ ಸಿಬ್ಬಂದಿಯು ಬೃಹತ್ ಗಾತ್ರದ ಗುಂಡಿ ತೋಡಿ ಹಂದಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಸಿಬ್ಬಂದಿಯ ಈ ಕಾರ್ಯಕ್ಕೆ ಹಂದಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರೈತರಿಂದ ದೂರು ಕೇಳಿ ಬಂದ ಬಳಿಕ ಹಂದಿ ಮಾಲೀಕರಿಗೆ ವಿಷಯ ತಿಳಿಸಲಾಗಿತ್ತು. ಆದರೆ ಹಂದಿಗಳ ಮಾಲೀಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ ಎನ್ನಲಾಗ್ತಿದೆ. ಇದೀಗ ಸಿಬ್ಬಂದಿಯು ಜೀವಂತ ಹಂದಿಗಳನ್ನು ಅರಣ್ಯಕ್ಕೆ ಬಿಟ್ಟು, ಸತ್ತ ಹಂದಿಗಳನ್ನ ಗುಂಡಿಯಲ್ಲಿ ಮುಚ್ಚಿದ್ದೇವೆ ಎಂದು ಹೇಳಿದ್ದಾರೆ.