ಕರ್ನಾಟಕ

karnataka

ETV Bharat / state

ರಷ್ಯಾ ದಾಳಿಗೆ ಉಕ್ರೇನ್​ನಲ್ಲಿದ್ದ ಹಾವೇರಿ ವಿದ್ಯಾರ್ಥಿ ಮೃತ : ಉಳಿದಿಬ್ಬರು ವಿದ್ಯಾರ್ಥಿಗಳ ಕರೆತರುವಂತೆ ಪೋಷಕರ ಅಳಲು

ಮುಂಜಾನೆ 7ಗಂಟೆ ಹೊತ್ತಿಗೆ ನವೀನ್​ ಹಲವರ ಜತೆ ತಿಂಡಿ ಪಡೆಯಲು ಹೊರಗೆ ನಿಂತಿದ್ದ ಸಮಯದಲ್ಲೇ ರಷ್ಯಾ ಸೇನೆ ರಾಕೆಟ್​ ದಾಳಿ ನಡೆಸಿದೆ ಎಂಬುದು ತಿಳಿದು ಬಂದಿದೆ..

parents-outrage-gainst-mp-cm-udasi-in-haveri
ನವೀನ್​ ಮನೆ

By

Published : Mar 1, 2022, 4:35 PM IST

Updated : Mar 1, 2022, 5:03 PM IST

ಹಾವೇರಿ :ರಷ್ಯಾ ದಾಳಿಯಿಂದಾಗಿ ಉಕ್ರೇನ್​ನಲ್ಲಿದ್ದ ಹಾವೇರಿಯ ವಿದ್ಯಾರ್ಥಿ ನವೀನ್​ ಎಂಬುವರು ಮೃತಪಟ್ಟಿದ್ದಾರೆ. ವಿದ್ಯಾರ್ಥಿಯ ಸಾವಿನ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಜಾನೆ 7ಗಂಟೆ ಹೊತ್ತಿಗೆ ನವೀನ್​ ಇನ್ನೂ ಹಲವರ ಜತೆ ತಿಂಡಿ ಪಡೆಯಲು ಹೊರಗೆ ನಿಂತಿದ್ದ ಸಮಯದಲ್ಲೇ ರಷ್ಯಾ ಸೇನೆ ರಾಕೆಟ್​ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳ ಕರೆತರುವಂತೆ ಪೋಷಕರ ಅಳಲು

ನವೀನ್ ಗ್ಯಾನಗೌಡರ್​ ಉಕ್ರೇನ್​ನಲ್ಲಿ ನಾಲ್ಕನೇ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಇವರ ತಂದೆ ಶೇಕರಪ್ಪ ವ್ಯವಸಾಯ ಮಾಡುತ್ತಿದ್ದಾರೆ. ವಿಜಯಲಕ್ಷ್ಮಿ ತಾಯಿ ಗೃಹಿಣಿ ಎಂಬುದು ತಿಳಿದು ಬಂದಿದೆ.

ಘಟನೆ ಬಗ್ಗೆ ಪೋಷಕರಾದ ಶ್ರೀಧರ್​ ಕೃಷ್ಣಮೂರ್ತಿ ವೈಶಾಲ್​​ ಅವರು ಮಾತನಾಡಿದ್ದು, 'ನಮ್ಮ ಮಗ ಸುಮನ್​ ವೈಶಾಲ್​​ ಅವರು ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಷ್ಯಾದ ದಾಳಿ ಭೀತಿಯಿಂದಾಗಿ ಈಗಾಗಲೇ ಎರಡು ದಿನಗಳ ಹಿಂದೆಯೇ ನಾವು ಪ್ರಲ್ಹಾದ್​ ಜೋಶಿ ಅವರಿಗೆ ಪತ್ರವನ್ನು ಕೊಟ್ಟಿದ್ದೇವೆ.

ಫೋನ್​ ಮಾಡಿದ್ದೇವೆ. ಬಾಗಲಕೋಟೆಗೆ ಹೋಗಿ ಅಲ್ಲಿನ ಎಂಪಿಗೆ ಮನವಿ ಮಾಡಿದ್ದೇವೆ. ಈಗಾಗಲೇ ಇಲ್ಲಿಂದ ಮೂವರು ವಿದ್ಯಾರ್ಥಿಗಳು ಉಕ್ರೇನ್​ಗೆ ತೆರಳಿದ್ದರು. ಆದರೆ, ಅದರಲ್ಲಿ ಒಬ್ಬರು ಈಗ ಮೃತಪಟ್ಟಿದ್ದಾರೆ. ಹೀಗಾದ್ರೆ, ನಮ್ಮ ಮಕ್ಕಳ ಕತೆಯೇನು?' ಎಂಬುದಾಗಿ ಆತಂಕ ಹೊರ ಹಾಕಿದ್ದಾರೆ.

'ಈಗಾಗಲೇ ಚಳ್ಳಕರೆಯ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನಮಗೆ ಇರೋದು ಒಬ್ಬನೇ ಮಗ. ದಯವಿಟ್ಟು ಅವನನ್ನು ಕರೆತರುವ ಪ್ರಯತ್ನ ಮಾಡಿ. ಈಗಾಗಲೇ ನಮ್ಮ ಮಗ ಎಂಪಿ ಸಿಎಂ ಉದಾಸಿ ಅವರಿಗೆ ಕರೆ ಮಾಡಿದ್ದಾನೆ. ಆದರೆ, ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ. ಅವನನ್ನು ಕರೆತರುವ ಪ್ರಯತ್ನ ಮಾಡಿ, ಇಲ್ಲದಿದ್ದರೆ ಉದಾಸಿ ಅವರ ಹೆಸರು ಬರೆದು ನಾವು ಆತ್ಮಹತ್ಯೆ ಮಾಡಿಕೊಳ್ಳುವುದು ನಿಶ್ಚಿತ' ಎಂಬುದಾಗಿ ಪೋಷಕರಾದ ವೆಂಕಟೇಶ್​ ವೈಶಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಓದಿ:ವುಡ್​ ಕಾಂಪ್ಲೆಕ್ಸ್​​ ಬಳಿ ನಿಲ್ಲಿಸಿದ್ದ ಖಾಸಗಿ ಬಸ್​​​ಗಳಿಗೆ ಬೆಂಕಿ.. ಧಗಧಗನೇ ಹೊತ್ತಿ ಉರಿದ 8 ವಾಹನಗಳು​​!

Last Updated : Mar 1, 2022, 5:03 PM IST

For All Latest Updates

ABOUT THE AUTHOR

...view details