ಕರ್ನಾಟಕ

karnataka

ETV Bharat / state

ವಿಧಾನಸಭೆ ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ರಾಜ್ಯದ ಎರಡು ವಿಧಾನಸಭೆ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

nomination-filing-starts-for-assembly-polls-from-today
ವಿಧಾನಸಭೆ ಉಪಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

By

Published : Oct 1, 2021, 10:39 AM IST

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅ.30ರಂದು ನಡೆಯಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.8ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಅ.13ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿರಲಿದೆ. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಹೀಗಾಗಿ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ತಯಾರಿ ನಡೆಸಿದೆ ಎಂದಿದ್ದಾರೆ.

ಉಪಚುನಾವಣೆ ಕುರಿತಂತೆ ಹಾವೇರಿ ಜಿಲ್ಲಾಧಿಕಾರಿ ಮಾಹಿತಿ

ಕೋವಿಡ್ ಹಿನ್ನೆಲೆ ಎರಡೂ ಡೋಸ್ ಲಸಿಕೆ ಪಡೆದ ಸಿಬ್ಬಂದಿಯನ್ನು ಮಾತ್ರ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು, ಜೊತೆಗೆ ಮತಗಟ್ಟೆ ಬಳಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರಲಿದೆ ಎಂದಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 1,05,405 ಪುರುಷ ಮತದಾರರು ಮತ್ತು 98,798 ಮಹಿಳಾ ಮತದಾರರು 83 ಸೇವಾ ಮತ್ತು 3 ಇತರ ಮತದಾರರು ಸೇರಿ ಒಟ್ಟು 2,04,289 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಚುನಾವಣೆಗೆ ಬಿಗಿ ಭದ್ರತೆ

ಈ ವೇಳೆ ಮಾತನಾಡಿದ ಹಾವೇರಿ ಎಸ್​​ಪಿ ಹನುಮಂತರಾಯ, ಸುಗಮ ಚುನಾವಣೆಗೆ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಪ್ರತಿ ಮತಗಟ್ಟೆಗೆ ಒಬ್ಬ ಹೆಡ್ ಕಾನ್ಸ್​​ಟೇಬಲ್​ ಮತ್ತು ಅತೀಸೂಕ್ಷ್ಮ ಮತಗಟ್ಟೆಗೆ ಎಎಸ್ಐ ನಿಯೋಜನೆ ಮಾಡಲಾಗುವುದು. 4 ಡಿವೈಎಸ್​ಪಿ 7 ಇನ್ಸ್​ಪೆಕ್ಟರ್​, ಕೆಎಸ್​​ಆರ್​ಪಿ ಜೊತೆ ಮಿಲಿಟರಿ ಪಡೆ ಸಹ ನಿಯೋಜಿಸಲಾಗುವುದು ಎಂದಿದ್ದಾರೆ.

ಜೊತೆಗೆ ಚುನಾವಣೆ ಹಿನ್ನೆಲೆ ಯಾವುದೇ ಅಕ್ರಮ ನಡೆಯದಂತೆ ತಪಾಸಣೆಗಾಗಿ 16 ಚೆಕ್​ಪೋಸ್ಟ್​ಗಳು, 24 ಗಂಟೆಯೂ ಮೇಲ್ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ:ಧಾರಾಕಾರ ಮಳೆಗೆ KRಪೇಟೆ ಬಸ್ ನಿಲ್ದಾಣ ಜಲಾವೃತ: ನಾಡದೋಣಿ ಬಳಸಿ ಪ್ರಯಾಣಿಕರ‌ ರಕ್ಷಣೆ

ABOUT THE AUTHOR

...view details