ಹಾವೇರಿ: ವಾರದ ಆರಂಭದಲ್ಲಿ ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ತಂದಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ವಾರಾಂತ್ಯದ ವೇಳೆಗೆ ಕಡಿಮೆಯಾಗಿದೆ.
ಹಾವೇರಿಯಲ್ಲಿ ಹೊಸ ಕೊರೊನಾ ಪ್ರಕರಣಗಳಿಲ್ಲ; ಸಹಜ ಸ್ಥಿತಿಯತ್ತ ಜನಜೀವನ
ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಎರಡು ಪ್ರಕರಣಗಳು ಪಾಸಿಟಿವ್ ಬಂದ ಕಾರಣ ಜನತೆ ತೀವ್ರ ಆತಂಕದಲ್ಲಿದ್ದರು. ಆದರೆ ನಂತರದ ದಿನಗಳಲ್ಲಿ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳದಿರುವುದು ಜನರನ್ನು ನಿರಾಳಗೊಳಿಸಿದೆ.
ಹೊಸ ಕೊರೊನಾ ಪ್ರಕರಣಗಳಿಲ್ಲ
ಮುಂಬೈಯಿಂದ ಸವಣೂರಿಗೆ ಆಗಮಿಸಿದ್ದ ಮೂವರಲ್ಲಿ ಓರ್ವನಲ್ಲಿ ಕೊರೊನಾ ವೈರಸ್ ಕಂಡುಬಂದಿತ್ತು. ಆದ್ರೆ, ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಫಲಿತಾಂಶ ನೆಗೆಟಿವ್ ಬಂದಿದೆ. ಹೀಗಾಗಿ ಜಿಲ್ಲೆಯ ಜನತೆ ತುಸು ನೆಮ್ಮದಿಯಿಂದ ಇದ್ದಾರೆ.