ಕರ್ನಾಟಕ

karnataka

ETV Bharat / state

ಐಡಿ ಕಾರ್ಡ್​ ಇದ್ರೆ ಮಾತ್ರ ಪೆಟ್ರೋಲ್: ಹಾವೇರಿ ಜಿಲ್ಲಾಡಳಿತದಿಂದ ಹೀಗೊಂದು ಪ್ಲಾನ್.. - ಐಡಿ ಕಾರ್ಡ್

ಕೊರೊನಾ ಸೋಂಕು ಹರಡೋದನ್ನು ತಡೆಗಟ್ಟಲು ಹಾವೇರಿ ಜಿಲ್ಲಾಡಳಿತ ಪೆಟ್ರೋಲ್ ಬಂಕ್​ಗಳಿಗೆ ಸೂಚನೆ ನೀಡಿದೆ. ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಪೆಟ್ರೋಲ್ ಅನ್ನೋ ಮೂಲಕ ಜಿಲ್ಲಾಡಳಿತ ಪ್ಲಾನ್​ ಮಾಡಿಕೊಂಡಿದೆ.

ಪೆಟ್ರೋಲ್‌ ಬಂಕ್
ಹಾವೇರಿ

By

Published : Mar 28, 2020, 2:58 PM IST

ಹಾವೇರಿ:ಮಹಾಮಾರಿ ಕೊರೊನಾ ಸೋಂಕು ಹರಡೋದನ್ನ ತಡೆಗಟ್ಟಲು ಜಿಲ್ಲಾಡಳಿತ ವಿನೂತನ​ ಯೋಜನೆ ರೂಪಿಸಿದೆ.

ಹಾವೇರಿ ಜಿಲ್ಲಾಡಳಿತದಿಂದ ಹೀಗೊಂದು ಪ್ಲಾನ್

ನಗರದಲ್ಲಿ ಬೇಕಾಬಿಟ್ಟಿ ಓಡಾಡೋ ವಾಹನ ಸವಾರರಿಗೆ ಪೆಟ್ರೋಲ್‌ ಬಂಕ್​ಗಳಲ್ಲಿ ಪೆಟ್ರೋಲ್ ಹಾಕದಂತೆ ಜಿಲ್ಲಾಡಳಿತ ಪೆಟ್ರೋಲ್ ಬಂಕ್​ಗಳಿಗೆ ಸೂಚನೆ ನೀಡಿದೆ. ಪೊಲೀಸ್ ಇಲಾಖೆ, ಬ್ಯಾಂಕ್ ಹಾಗೂ ಕರ್ತವ್ಯದಲ್ಲಿರೋ ವಿವಿಧ ಇಲಾಖೆಗಳ ಸಿಬ್ಬಂದಿಗಳ ವಾಹನಗಳಿಗೆ ಮಾತ್ರ ಬಂಕ್‌ಗಳಲ್ಲಿ ಪೆಟ್ರೋಲ್ ಸಿಗ್ತಿದೆ.

ಆದ್ರೆ ಪೆಟ್ರೋಲ್ ಬಂಕ್ ಬಳಿ ಇರೋ ಪೊಲೀಸ್ ಸಿಬ್ಬಂದಿಗೆ ಅವರವರ ಇಲಾಖೆ ನೀಡಿರೋ ಐಡಿ ಕಾರ್ಡ್ ತೋರಿಸಿದ್ರೆ ಮಾತ್ರ ಅಂಥವರ ವಾಹನಗಳಿಗೆ ಪೆಟ್ರೋಲ್ ಹಾಕಲಾಗ್ತಿದೆ. ಮನೆಬಿಟ್ಟು ಹೊರಗಡೆ ಬೇಕಾಬಿಟ್ಟಿಯಾಗಿ ಓಡಾಡೋ ವಾಹನ ಸವಾರರಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಈ ಪ್ಲಾನ್ ಮಾಡಿದೆ. ಜಿಲ್ಲಾಡಳಿತದ ಈ ಪ್ಲಾನ್​ನಿಂದ ಮನೆಬಿಟ್ಟು ಬೇಕಾಬಿಟ್ಟಿ ಹೊರಗೆ ಓಡಾಡೋರ ಸಂಖ್ಯೆ ಕಡಿಮೆ ಆಗಿದೆ. ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಪೆಟ್ರೋಲ್ ಅನ್ನೋ ಮೂಲಕ ಜಿಲ್ಲಾಡಳಿತ ಮಹಾಮಾರಿ ಕೊರೊನಾ ಸೋಂಕು ಹರಡೋದನ್ನ ತಡೆಯಲು ಇಂಥದ್ದೊಂದು ಪ್ಲಾನ್ ಮಾಡಿದೆ.

ABOUT THE AUTHOR

...view details