ಹಾವೇರಿ:ಶಾಸಕ ನೆಹರು ಓಲೇಕಾರ್ ಹಾವೇರಿ ಜಿಲ್ಲೆಯ ನೆರೆ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರ ನೋವುಗಳನ್ನು ಆಲಿಸಿದರು.
ಪ್ಯಾಂಟ್ ಏರಿಸಿಕೊಂಡು ನೆರೆ ಸಂತ್ರಸ್ತರ ಸಂಕಷ್ಟ ಆಲಿಸಿದ ನೆಹರು ಓಲೇಕಾರ್ - affected areas
ರಾಜ್ಯದಲ್ಲಿ ತೀವ್ರ ನೆರೆ ಉಂಟಾಗಿದ್ದು ಅದರ ಬಿಸಿ ಹಾವೇರಿ ಜಿಲ್ಲೆಗೂ ತಟ್ಟಿದ್ದು, ಅಲ್ಲಿನ ಶಾಸಕರಾದ ನೆಹರು ಓಲೇಕಾರ್ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ಕಷ್ಟಕ್ಕೆ ಸ್ಪಂದಿಸಿದರು.
ನೆರೆ ಪೀಡಿತ ಪ್ರದೇಶಗಳಿಗೆ
ಹಾವೇರಿ ತಾಲೂಕಿನ ಕೋಣನತಂಬಿಗಿ, ಮಣ್ಣೂರು, ಕೆಸರಳ್ಳಿ, ಕರ್ಜಿಗಿ ಹಾಗೂ ಹೊಸರಿತ್ತಿ ಮುಂತಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರು ಭೇಟಿ ನೀಡಿದ್ದು, ಪ್ರವಾಹ ಪೀಡಿತ ಪ್ರದೇಶದಲ್ಲಿನ ನೀರಿನಲ್ಲಿ ಸಂಚರಿಸಿ ಸಂತ್ರಸ್ತರ ನೋವುಗಳನ್ನು ಆಲಿಸಿದರು. ಅಲ್ಲದೆ ಇಂತಹ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಶಾಸಕ ನೆಹರು ಓಲೇಕಾರ್ ಸ್ವತಃ ತಾವೇ ಪ್ಯಾಂಟ್ ಏರಿಸಿಕೊಂಡು ಮಳೆ ನೀರಿನಲ್ಲಿ ನಡೆದು ನೆರೆ ವೀಕ್ಷಣೆ ಮಾಡಿದ್ದು ಸಂತ್ರಸ್ತರ ಮೆಚ್ಚುಗೆಗೆ ಪಾತ್ರವಾಯಿತು.