ಹಾವೇರಿ:ಕೊರೊನಾದಿಂದ ತಾಯಿ ಮತ್ತು ಮಗ ಒಂದೇ ದಿನ ಸಾವನ್ನಪ್ಪಿದ ಘಟನೆ, ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದಿದೆ.
ಹಾವೇರಿ: ಕೊರೊನಾಗೆ ತಾಯಿ- ಮಗ ಬಲಿ... ಒಂದೇ ಚಿತೆಯಲ್ಲಿ ಅಂತ್ಯಸಂಸ್ಕಾರ - died same day for corona
ಇದೇ 21ರಂದು ನಾಗರಾಜುಗೆ ತಗುಲಿದ್ದ ಸೋಂಕು ತಾಯಿ ಲಲಿತವ್ವಗೂ ವ್ಯಾಪಿಸಿತ್ತು. ಈ ಹಿನ್ನೆಲೆ ಲಲಿತವ್ವಳನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆ ಮತ್ತು ನಾಗರಾಜನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಾಯಿ ಮತ್ತು ಮಗ ಇಬ್ಬರು ಚಿಕಿತ್ಸೆಗೆ ಸ್ಪಂಧಿಸದೇ ಸಾವನ್ನಪ್ಪಿದ್ದಾರೆ.
ಲಲಿತವ್ವ ಬನ್ನಿಹಟ್ಟಿ (50) ನಾಗರಾಜ್ ಬನ್ನಿಹಟ್ಟಿ (30) ಕೊರೊನಾಗೆ ಬಲಿಯಾದವರು. ಇದೇ 21ರಂದು ನಾಗರಾಜುಗೆ ತಗುಲಿದ್ದ ಸೋಂಕು ತಾಯಿ ಲಲಿತವ್ವಗೂ ವ್ಯಾಪಿಸಿತ್ತು. ಈ ಹಿನ್ನೆಲೆ ಲಲಿತವ್ವಳನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆ ಮತ್ತು ನಾಗರಾಜನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಾಯಿ ಮತ್ತು ಮಗ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.
ಮೇ 28ರ ತಡರಾತ್ರಿ ಮಗ ಮತ್ತು ಮುಂಜಾನೆ ತಾಯಿ ಮೃತಪಟ್ಟಿದ್ದಾರೆ. ತಾಯಿ ಮತ್ತು ಮಗನ ಶವವನ್ನು ಒಂದೇ ಚಿತೆಯಲ್ಲಿರಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಐದು ಜನರಿದ್ದ ಈ ಕುಟುಂಬ ಇದೀಗ ಮೂರಕ್ಕೆ ಇಳಿದಿದೆ.