ಹಾವೇರಿ : ಕಾಂಗ್ರೆಸ್ನ ಮಹಾನಾಯಕ ಮತ್ತು ಬಿಜೆಪಿ ಯುವರಾಜರದ್ದು ಸಿಡಿ ಉತ್ಪನ್ನ ಮಾಡೋ ಎರಡು ಫ್ಯಾಕ್ಟರಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ಬಿಜೆಪಿ ಯುವರಾಜ ಮತ್ತು ಕಾಂಗ್ರೆಸ್ ಮಹಾನಾಯಕನಿಂದ ಸಿಡಿ ಖರೀದಿ : ಯತ್ನಾಳ್ ಆರೋಪ
ಇಂದು ಹೆಸರು ಬಂದಿರುವ ಕಾಂಗ್ರೆಸ್ ನಾಯಕ ಇಂಥ ಸಿಡಿಗಳನ್ನು ಖರೀದಿ ಮಾಡುತ್ತಾರೆ. ಕೆಲ ಹೆಣ್ಣುಮಕ್ಕಳ ಮೂಲಕ ಬ್ಲ್ಯಾಕ್ಮೇಲ್ ಮಾಡಿ, ಸಿಡಿ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಸಪೋರ್ಟ್ ಮಾಡದಿದ್ರೆ, ತೊಂದರೆ ಕೊಟ್ಟರೆ ಸಿಡಿ ಬಿಡ್ತೀನಿ ಅಂತಾ ಭಯ ಪಡಿಸುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ.
ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಇಂದು ಹೆಸರು ಬಂದಿರುವ ಕಾಂಗ್ರೆಸ್ ನಾಯಕ ಇಂಥ ಸಿಡಿಗಳನ್ನು ಖರೀದಿ ಮಾಡುತ್ತಾರೆ. ಕೆಲ ಹೆಣ್ಣುಮಕ್ಕಳ ಮೂಲಕ ಬ್ಲ್ಯಾಕ್ಮೇಲ್ ಮಾಡಿ, ಸಿಡಿ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಸಪೋರ್ಟ್ ಮಾಡದಿದ್ರೆ, ತೊಂದರೆ ಕೊಟ್ಟರೆ ಸಿಡಿ ಬಿಡ್ತೀನಿ ಅಂತಾ ಭಯ ಪಡಿಸುತ್ತಾರೆ. ಎಷ್ಟೋ ಶಾಸಕರು ಇದೇ ಭಯದ ವಾತಾವರಣದಲ್ಲಿದ್ದಾರೆ ಎಂದರು.
ನಿನ್ನೆ ಸಿಡಿ ಯುವತಿ ಹೆಸರು ಹೇಳಿದಾಳಲ್ಲ. ಅವರ ಡ್ರೈವರ್ ಜೊತೆ ಓಡಾಡಿರೋ ಬಗ್ಗೆ ಚರ್ಚೆ ಆಗ್ತಿದೆಯಲ್ಲ. ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ. ಬಿಜೆಪಿಯಲ್ಲೊಬ್ಬ ಯುವರಾಜ ಮತ್ತು ಕಾಂಗ್ರೆಸ್ ಮಹಾನಾಯಕ ಇಬ್ಬರೂ ಇದ್ದಾರೆಂದು ಹೇಳಿದ್ದೆ. ಈಗ ಕಾಂಗ್ರೆಸ್ ಮಹಾನಾಯಕನದ್ದು ಹೊರಬಂದಿದೆ. ಕೆಲವೇ ದಿನಗಳಲ್ಲಿ ಬಿಜೆಪಿಯ ಯುವರಾಜನದ್ದು ಹೊರಬರಲಿದೆ. ಈ ಸಿಡಿ ಯುವರಾಜನ ರಕ್ಷಣೆ ಮಾಡಲು ಪ್ರಕರಣವನ್ನು ಸಿಸಿಬಿಗೆ ಕೊಟ್ಟಿದ್ದು. ಸಿಬಿಐಗೆ ಕೊಟ್ಟರೆ ಎಲ್ಲಾ ಕಳ್ಳರನ್ನ ಒಳಗೆ ಹಾಕ್ತಾರೆ. ಇದೇ ರೀತಿ ಬಹಳ ಮಂದಿಯ ಸಿಡಿ ಮಾಡಿದ್ದಾರೆ. ಐಪಿಎಸ್, ಐಎಎಸ್ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರ ಸಿಡಿಗಳು ಅವರ ಬಳಿಯಿವೆ. ಇವರಿಬ್ಬರೂ ಸಿಡಿ ಖರೀದಿದಾರರು. ಮೆಕ್ಕೆಜೋಳ, ಮೆಣಸಿನಕಾಯಿ ಖರೀದಿ ಮಾಡೋ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೊಬ್ಬರು ಸಿಡಿ ಖರೀದಿ ಮಾಡುವವರಿದ್ದಾರೆ. ಬಿಜೆಪಿಯ ಉನ್ನತ ನಾಯಕನ ಸಿಡಿ ಕಾಂಗ್ರೆಸ್ನ ಮಹಾನಾಯಕನ ಬಳಿ ಇದೆ. ಅವನನ್ನು ನೋಡಿದರೆ ಬಿಜೆಪಿ ನಾಯಕರು ಭಯಪಡ್ತಾರೆ. ಹಿಂದೆ ಆ ಮಹಾನಾಯಕನೇ ಸಿಡಿ ಇರೋ ಬಗ್ಗೆ ಹೇಳಿದ್ದಾನೆ ಎಂದು ಯತ್ನಾಳ್ ತಿಳಿಸಿದರು.