ಹಾನಗಲ್: ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಸರ್ಕಾರ ನೀಡಿದ್ದ ದಿನಸಿ ಕಿಟ್ಗಳನ್ನು ರಾತ್ರೋ ರಾತ್ರಿ ಬೇಕಾಬಿಟ್ಟಿ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೂಲಿ ಕಾರ್ಮಿಕರಿಗೆ ನೀಡಬೇಕಿದ್ದ ದಿನಸಿ ಕಿಟ್ ಬೇಕಾಬಿಟ್ಟಿ ಹಂಚಿಕೆಯ ಆರೋಪ - ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ
ಹಾನಗಲ್ ಪಟ್ಟಣದಲ್ಲಿ ರಾತ್ರೋ ರಾತ್ರಿ ದಿನಸಿ ಕಿಟ್ಗಳ ಹಂಚಿಕೆ ಮಾಡುತ್ತಿದ್ದಾರೆ. ವಿತರಣೆ ವೇಳೆ ಕಾರ್ಯಕರ್ತರು ಬರುತ್ತಿದ್ದಂತೆ ವಿತರಕರು ಕಿಟ್ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಬೇಕಾಬಿಟ್ಟಿ ಹಂಚಿಕೆ
ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ರಾತ್ರೋ ರಾತ್ರಿ ದಿನಸಿ ಕಿಟ್ಹಂ ಚಿಕೆ ಮಾಡುತ್ತಿದ್ದಾರೆ. ವಿತರಣೆ ವೇಳೆ ಕಾರ್ಯಕರ್ತರು ಬರುತ್ತಿದ್ದಂತೆ ಹಂಚಿಕೆದಾರರು ಕಿಟ್ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಕಾರ್ಮಿಕರಿಗೆ ಸಿಗಬೇಕಿದ್ದ ಕಿಟ್ಗಳನ್ನು ಮನಬಂದಂತೆ ವಿತರಿಸಲಾಗುತ್ತಿದೆ. ಸಂಬಂದಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.