ಕರ್ನಾಟಕ

karnataka

ETV Bharat / state

ಜನರ ಉಳಿವಿಗಾಗಿ ಆಕ್ಸಿಜನ್ ಅವಶ್ಯಕತೆ ಮುಖ್ಯ: ಸಚಿವ ಆರ್.ಶಂಕರ್ - ರಾಣೆಬೆನ್ನೂರು

ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಆಕ್ಸಿಜನ್​​ ಬಸ್​​ಗೆ ಸಚಿವ ಆರ್.ಶಂಕರ್ ಚಾಲನೆ ನೀಡಿದರು.

Minister R. shankar Inaugurates Oxygen bus
ಆಕ್ಸಿಜನ್​​ ಬಸ್​​ಗೆ ಚಾಲನೆ ನೀಡಿದ ಸಚಿವ ಆರ್.ಶಂಕರ್

By

Published : May 23, 2021, 1:27 PM IST

ರಾಣೆಬೆನ್ನೂರು:ದೇಶದಲ್ಲಿ ಕೊರೊನಾ ಮಹಾಮಾರಿ ತಾಂಡವಾಡುತ್ತಿದ್ದು, ರೋಗಿಗಳ ಜೀವ ಉಳಿಸುವುದಕ್ಕೆ ಆಕ್ಸಿಜನ್ ಅವಶ್ಯಕತೆ ಮುಖ್ಯವಾಗಿದೆ ಎಂದು ಸಚಿವ ಆರ್.ಶಂಕರ್ ಹೇಳಿದರು.

ಆಕ್ಸಿಜನ್​​ ಬಸ್​​ಗೆ ಚಾಲನೆ ನೀಡಿದ ಸಚಿವ ಆರ್.ಶಂಕರ್

ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಬಸ್​​ಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. ತಾಲೂಕಿನಲ್ಲಿ ಜನರು ಕೊರೊನಾದಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಗಾಗಿ ವಾ.ಕ.ರಾ.ರ.ಸಾ ಸಂಸ್ಥೆ ವತಿಯಿಂದ ಹಾವೇರಿ ಜಿಲ್ಲೆಯಲ್ಲಿ 2 ಆಕ್ಸಿ ಬಸ್​​ಗಳನ್ನು ನೀಡಿದ್ದಾರೆ. ಇದರಲ್ಲಿ ಒಂದು ಆಕ್ಸಿ ಬಸ್​​ನಲ್ಲಿ ತುರ್ತು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ಕಾರ್ಯಕ್ರಮ ಮೂಲಕ ‌ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ರಾಣೆಬೆನ್ನೂರು ತಾಲೂಕಿನಲ್ಲಿ ಬೆಡ್ ಕೊರತೆ, ವೆಂಟಿಲೇಟರ್ ಕೊರತೆ, ಆಕ್ಸಿಜನ್ ಕೊರತೆ ಇದೆ ಎಂದು ದಿನ ನಿತ್ಯ ಸಾರ್ವಜನಿಕರು ಫೋನ್​ ಮಾಡುತ್ತಿದ್ದಾರೆ. ಆದರೆ ಸರ್ಕಾರ ಈಗಾಗಲೇ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ವಾ.ಕ.ರಾ.ರ.ಸಾ ಸಂಸ್ಥೆ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷ ಕುಮಾರ್​ ಪಾಟೀಲ, ಕೆಎಸ್ಆರ್​ಟಿಸಿ ಡಿಸಿ ಜಗದೀಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ABOUT THE AUTHOR

...view details