ಹಾನಗಲ್(ಹಾವೇರಿ): ಬಿಜೆಪಿಯವರು ಗೋಣಿ ಚೀಲದಲ್ಲಿ ದುಡ್ಡು ತಗೊಂಡು ಬಂದು ಹಂಚ್ತಾ ಇದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಕ್ಕೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.
ಗೋಣಿ ಚೀಲದಲ್ಲಿ ಹಂಚೋಕೆ ದುಡ್ಡು ಎಲ್ಲಿಂದ ಬಂದಿದೆ ಅಂತ ಮಾಹಿತಿ ಕೊಡಿ.. ಡಿಕೆಶಿಗೆ ಸಚಿವ ಮುನಿರತ್ನ ತಿರುಗೇಟು - ಹಾನಗಲ್ ಉಪ ಚುನಾವಣೆ
ಬಿಜೆಪಿ ಗೋಣಿ ಚೀಲದಲ್ಲಿ ದುಡ್ಡು ತಗೊಂಡು ಬಂದು ಹಂಚ್ತಾ ಇದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಮುನಿರತ್ನ, ದುಡ್ಡು ಎಲ್ಲಿಂದ ಬಂದಿದೆ? ಏನು ಅಂತ ಮಾಹಿತಿ ಕೊಡಲಿ? ಇದನ್ನು ಯಾಕೆ ಚುನಾವಣೆ ಆಯೋಗದ ಗಮನಕ್ಕೆ ತಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಹಾನಗಲ್‌ನಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದುಡ್ಡು ಎಲ್ಲಿಂದ ಬಂದಿದೆ? ಏನು ಅಂತ ಮಾಹಿತಿ ಕೊಡಲಿ? ಇದರ ಉದ್ದೇಶ ಏನು? ಇದನ್ನು ಯಾಕೆ ಚುನಾವಣ ಆಯೋಗದ ಗಮನಕ್ಕೆ ತಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಡಿ ಕೆ ಶಿವಕುಮಾರ್ ಬಹಳ ಹಿರಿಯರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಿಗೆ ಹಣ ಪಡೆಯಿರಿ ಎಂದು ಹೇಳೋದು ಎಷ್ಟು ಸರಿ? ಅದು ಮತದಾರರಿಗೆ ಪ್ರಚೋದನೆ ನೀಡಿದ ಹಾಗೆ ಅಲ್ಲವೇ? ಇದು ಕಾನೂನಿಗೆ ವಿರುದ್ಧವಾದದ್ದು. ನಾವು ಮತ ಭಿಕ್ಷೆ ಕೇಳಬೇಕಷ್ಟೆ ಎಂದು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಒಳ ಒಪ್ಪಂದ ಅನ್ನೋದು ಯಾವಾಗ ಆಯ್ತು? ಸಮ್ಮಿಶ್ರ ಸರ್ಕಾರದಲ್ಲಿ ನಡೆದ ಒಳ ಒಪ್ಪಂದದಿಂದ ಏನೇನೆಲ್ಲಾ ಆಯ್ತು? ಮೊದಲು ಅದನ್ನ ಮಾತಾಡಬೇಕು. 14 ತಿಂಗಳಿಗೆ ಏನೇನಾಯ್ತು? ಉತ್ತರ ಸಿಗ್ತಲ್ಲ? ಇನ್ನೂ ಒಳ ಒಪ್ಪಂದದ ಪ್ರಶ್ನೆ ಬೇಕಾ? ಮುಗಿದು ಹೋಯ್ತು ಎಲ್ಲ. ಒಂದು ತಪ್ಪು ಹೆಜ್ಜೆ, ಒಂದು ತಪ್ಪು ನಿರ್ಧಾರ ಇಷ್ಟೆಲ್ಲ ಪಾಠ ಕಲಿಸಿದೆ ಎಂದಿದ್ದಾರೆ.