ಹಾವೇರಿ: ಉಗ್ರಗಾಮಿಗಳು ಎನ್ನುವ ಕ್ಯಾಸೆಟ್ನ್ನು ಆರ್‌ಎಸ್‌ಎಸ್ ತಯಾರಿಸಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂತವರು ರಾಷ್ಟ್ರದ್ರೋಹಿಗಳು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂನ ತುಂಗಾರತಿಯಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಇವರು ಮನುಷ್ಯರೇ ಅಲ್ಲ. ಸಿದ್ದರಾಮಯ್ಯ ನನ್ನ ಒಳ್ಳೆಯ ಸ್ನೇಹಿತ, ಆದರೆ ಬುದ್ಧಿಗೆಟ್ಟ ಸ್ನೇಹಿತ. ಎಲ್ಲರೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯವಹರಿಸಲು ಹಿಂದಿ ಬಳಕೆ ಅನಿವಾರ್ಯ. ಏಕೆಂದರೆ ಎಲ್ಲರಿಗೂ ಇಂಗ್ಲಿಷ್ ಬರಲ್ಲ. ಆದರೆ ಇವರು ಅದಕ್ಕೂ ವಿರೋಧ ಮಾಡ್ತಾರೆ. ಸಿದ್ದರಾಮಯ್ಯನವರಿಗೆ ಬುದ್ಧಿ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಜನರು ಬೆಂಬಲಿಸ್ತಾರೆ. ಆದರೆ ಸಿದ್ದರಾಮಯ್ಯ ಹೇಳಿಕೆಯನ್ನ ವಿರೋಧಿಸುತ್ತಾರೆ ಎಂದರು.