ಹಾವೇರಿ :ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ ನೇತೃತ್ವದಲ್ಲಿ ಇಂದು ಕಾಗಿನೆಲೆಯಿಂದ-ಬೆಂಗಳೂರಿಗೆ ಪಾದಯಾತ್ರೆ ಆರಂಭವಾಗಿದ್ದು, ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಬ್ಲಾಕ್ ಮೇಲ್ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಬ್ಲಾಕ್ ಮೇಲ್ : ಈಶ್ವರಪ್ಪ - CD Black mail
ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದು ಸಚಿವ ಈಶ್ವರಪ್ಪ ಕಾಗಿನೆಲೆಯಲ್ಲಿ ಹೇಳಿದ್ದಾರೆ.
ಕಾಗಿನೆಲೆಯಲ್ಲಿ ಮಾತನಾಡಿದ ಸಚಿವರು, ಕುರುಬರಿಗೆ ಎಸ್ಟಿ ಮೀಸಲಾತಿ ಸಿಗಬೇಕೆಂದು ರಾಜ್ಯದ ಎಲ್ಲಾ ಕಡೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಸಮಾವೇಶಗಳು ನಡೆದಿವೆ. ಇದೀಗ ಮೀಸಲಾತಿಗಾಗಿ ಸ್ವಾಮಿಜಿಗಳು ಕಾಗಿನೆಲೆಯಿಂದ ಬೆಂಗಳೂರು ವರೆಗೆ 340 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಫೆಬ್ರುವರಿ 7ರಂದು ಬೆಂಗಳೂರಿನಲ್ಲಿ ಹತ್ತು ಲಕ್ಷ ಜನ ಸೇರಿ ಸಮಾವೇಶ ನಡೆಯಲಿದ್ದು, ಕುರುಬ ಜನಾಂಗಕ್ಕೆ ಎಸ್ಟಿ ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದರು.
ಇದೇ ವೇಳೆ ಸಿಡಿ ಬ್ಲಾಕ್ಮೇಲ್ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ,ಸಿದ್ದರಾಮಯ್ಯ ಅಂದ್ರೆ ಬ್ಲ್ಯಾಕ್ ಮೇಲ್, ಬ್ಲ್ಯಾಕ್ ಮೇಲೆ ಅಂದ್ರೆ ಸಿದ್ದರಾಮಯ್ಯ . ಅವರಿಗೆ ಯಾರಾದ್ರೂ ಬ್ಲ್ಯಾಕ್ ಮೇಲ್ ಮಾಡಿರಬಹುದೇನೋ ಎಂದರು.