ಹಾವೇರಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, 'ದುಷ್ಮನ್ ಕಂಹಾ ಹೈ ಅಂದರೆ ಬಗಲ್ ಮೇ ಹೈ' ಎಂದಿದ್ದಾರೆ. ಈ ರೀತಿ ಉಂಡ ಮನೆಗೆ ದ್ರೋಹ ಬಗೆಯುವವರು ಎಲ್ಲಾ ಕಡೆಯೂ ಇರುತ್ತಾರೆ. ಅದನ್ನ ನೋಡಿಕೊಂಡು ಗೆಲ್ಲುವುದೇ ರಾಜಕೀಯ ಎಂದರು.
ಜ್ಯೂಲಿಯಸ್ ಸೀಜರ್, ಬಸವೇಶ್ವರರ ಕಾಲದಿಂದಲೂ ವಂಚಕರು ಅವರ ಜೊತೆಯಲ್ಲೇ ಇದ್ದಾರೆ. ಅಷ್ಟೇ ಯಾಕೆ ಟಿಪ್ಪು ಸುಲ್ತಾನ್ಗೆ ಮೀರ್ ಸಾದಿಕ್ ದ್ರೋಹ ಬಗೆದರು. ಅಂತಹ ಮೀರ್ ಸಾದಿಕ್‌ರು ಎಲ್ಲ ಕಡೆ ಇರುತ್ತಾರೆ. ಈಗ ಸಿದ್ದರಾಮಯ್ಯನವರಿಗೆ ಅನುಭವವಾಗಿದೆ. ಅದನ್ನೇ ಅವರು ಹೇಳಿದ್ದಾರೆ ಎಂದರು.