ಹಾವೇರಿ: ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪರ 78ನೇ ಹುತಾತ್ಮ ದಿನಾಚರಣೆ ಆಚರಿಸಲಾಯಿತು.
ಹಾವೇರಿಯಲ್ಲಿ ಹುತಾತ್ಮ ಮೈಲಾರ ಮಹದೇವಪ್ಪ ಸ್ಮರಣೆ: ಪ್ರತಿಮೆಗೆ ಡಿಸಿ ಮಾಲಾರ್ಪಣೆ
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಬ್ರಿಟಿಷರ ಗುಂಡೇಟಿಗೆ ಬಲಿಯಾಗಿದ್ದ ಮೈಲಾರ ಮಹದೇವಪ್ಪ ಅವರ 78 ನೇ ಹುತಾತ್ಮ ದಿನದ ಅಂಗವಾಗಿ ಹಾವೇರಿಯಲ್ಲಿ ಮಹದೇವಪ್ಪ ಪ್ರತಿಮೆಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ್ ಮಾಲಾರ್ಪಣೆ ಮಾಡಿದರು.
ಹಾವೇರಿಯಲ್ಲಿ ಹುತಾತ್ಮ ಮೈಲಾರ ಮಹದೇವಪ್ಪರ ಸ್ಮರಣೆ
ಮೈಲಾರ ಮಹದೇವಪ್ಪ ಪ್ರತಿಮೆಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ್ ಮಾಲಾರ್ಪಣೆ ಮಾಡಿದರು. ಮಹಾತ್ಮಾ ಗಾಂಧೀಜಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಎಂದು ಸ್ಮರಿಸಿದರು.
ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದ ಮೈಲಾರ ಮಹದೇವಪ್ಪ 1943 ರ ಏಪ್ರಿಲ್ 1 ರಂದು ಗುಂಡೇಟಿಗೆ ಬಲಿಯಾಗಿದ್ದರು. ಅವರ ಜೊತೆ ಒಡನಾಡಿಗಳಾಗಿದ್ದ ತಿರಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಸಹ ಹುತಾತ್ಮರಾಗಿದ್ದರು. ಈ ಮೂವರ ಅಂತ್ಯಕ್ರಿಯೆಯನ್ನ ಹಾವೇರಿಯಲ್ಲಿ ಮಾಡಲಾಗಿತ್ತು.