ಹಾವೇರಿ :ಗೋಲಿಬಾರ್ ನಡೆದು ಇಂದಿಗೆ 12 ವರ್ಷವಾದ ಹಿನ್ನೆಲೆಯಲ್ಲಿ ವಿವಿಧ ರೈತಪರ ಸಂಘಟನೆಗಳು ಹಾವೇರಿಯಲ್ಲಿಂದು ರೈತ ಹುತಾತ್ಮ ದಿನಾಚರಣೆ ಆಚರಿಸಿದವು.
ಗೋಲಿಬಾರ್ಗೆ ಇಂದಿಗೆ 12 ವರ್ಷ... ಹಾವೇರಿಯಲ್ಲಿ ಹುತಾತ್ಮ ರೈತರ ದಿನಾಚರಣೆ - haveri
ಗೋಲಿಬಾರ್ ನಡೆದು ಇಂದಿಗೆ 12 ವರ್ಷವಾದ ಹಿನ್ನೆಲೆಯಲ್ಲಿ ವಿವಿಧ ರೈತಪರ ಸಂಘಟನೆಗಳು ಹಾವೇರಿಯಲ್ಲಿಂದು ರೈತ ಹುತಾತ್ಮ ದಿನಾಚರಣೆ ಆಚರಿಸಿದವು.
ಹುತಾತ್ಮ ರೈತರ ದಿನಾಚರಣೆ ಆಚರಣೆ
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ರೈತ ಸ್ಮಾರಕಕ್ಕೆ ರೈತ ಮುಖಂಡರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರೈತರು ಹುತಾತ್ಮ ರೈತರಾದ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿಯವರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.
ಇಂದು ನಿಧನರಾದ ಡಾ. ಗಿರೀಶ್ ಕಾರ್ನಾಡ್ ಅವರಿಗೆ ರೈತರು ಮೌನಾಚರಣೆ ಸಲ್ಲಿಸುವ ಮೂಲಕ ಸಂತಾಪ ಸಲ್ಲಿಸಿದರು. ಹಸಿರು ಸೇನೆ ಮತ್ತು ಜಿಲ್ಲಾ ಸಂಘದ ಮುಖಂಡರು ಪಾಲ್ಗೊಂಡಿದ್ದರು.