ಕರ್ನಾಟಕ

karnataka

ETV Bharat / state

ವಯಸ್ಸು ಐವತ್ತಾದರೂ ಸಿಗದ ಕನ್ಯೆ... ಮದುವೆ ಮಾಡಿಸಿ ಎಂದು ಗ್ರಾ. ಪಂ. ಮೊರೆ ಹೋದ ವರ! - ನರೇಗಲ್ ಗ್ರಾಮದ ದ್ಯಾಮಣ್ಣ ಕಮ್ಮಾರ್ ಪಂಚಾಯತಿಗೆ ಮೊರೆ ಹೋದ ವೃದ್ದ

50 ವರ್ಷದ ವ್ಯಕ್ತಿವೋರ್ವ ತನಗೆ ಕನ್ಯೆ ಹುಡುಕಿ ಮದುವೆ ಮಾಡಿಸಿ ಎಂದು ಗ್ರಾಮ ಪಂಚಾಯತ್​ ಬಾಗಿಲು ತಟ್ಟಿರುವ ಘಟನೆ ಹಾವೇರಿ ತಾಲೂಕಿನ ನರೇಗಲ್​ನಲ್ಲಿ ನಡೆದಿದೆ.

kn_hvr_03_different_manavi_7202143
ಎಷ್ಟು ಹುಡುಕಿದರು ಕನ್ಯೆ ಸಿಗುತ್ತಿಲ್ಲಾ, ಮದುವೆ ಮಾಡಿಸಿ ಎಂದು ಗ್ರಾಮ ಪಂಚಾಯಿತಿ ಮೊರೆ ಹೋದ, 50ರ ವೃದ್ದ....!

By

Published : Jan 31, 2020, 7:31 PM IST

ಹಾವೇರಿ:ಯುವಕ-ಯುವತಿಯರು 20ರ ಪ್ರಾಯಕ್ಕೆ ಕಾಲಿಡುತ್ತಿದ್ದಂತೆ ಅವರ ಮನೆಗಳಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ನೋಡುವ ಮಾತುಗಳು ಕೇಳಿಬರೋದು ಸಾಮಾನ್ಯ. ಆದ್ರೆ ಕೆಲವರು ತಮ್ಮ ಮಗಳಿಗೆ ಗಂಡು ಸಿಗ್ತಿಲ್ಲ ಅಂದ್ರೆ ಇನ್ನೂ ಕೆಲವರು ತಮ್ಮ ಮಗನಿಗೆ ವಧು ಸಿಗುತ್ತಿಲ್ಲ ಎಂಬ ಬೇಸರ ಹೊರಹಾಕೋದನ್ನು ಸಹ ಕಾಣುತ್ತೇವೆ. ಅಂದಹಾಗೇ ನಾವಿಲ್ಲಿ ಹೇಳ ಹೊರಟಿರುವುದು ಅಪರೂದ ವರನ ಬಗ್ಗೆ.

ಹೌದು, ಜಿಲ್ಲೆಯ ನರೇಗಲ್​ ಗ್ರಾಮದಲ್ಲಿ 50 ವರ್ಷದ ವರನೋರ್ವ ಇನ್ನೂ ಕನ್ಯೆಯ ಹುಡುಕಾಟದಲ್ಲೇ ಇದ್ದಾನೆ. ಈವರೆಗೂ ಎಷ್ಟೇ ಹುಡುಕಿದ್ರು ತನಗೆ ಕನ್ಯೆ ಸಿಗ್ತಿಲ್ಲವೆಂದು ಬೇಸತ್ತು ಕೊನೆಗೂ ಈತ ಗ್ರಾಮ ಪಂಚಾಯತ್​ ಮೆಟ್ಟಿಲೇರಿದ್ದಾನೆ. ತನಗೆ ಕನ್ಯೆ ನೋಡಿ ಮದುವೆ ಮಾಡಿಸಿ ಎಂದು ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ಮೊರೆ ಇಟ್ಟಿದ್ದಾನೆ.

ನರೇಗಲ್ ಗ್ರಾಮದ ದ್ಯಾಮಣ್ಣ ಕಮ್ಮಾರ್ ಗ್ರಾಮ ಪಂಚಾಯತ್​ ಮೊರೆ ಹೋಗಿರುವ ವರ. ಎಷ್ಟು ಹುಡುಕಿದರು ಕನ್ಯೆ ಸಿಗುತ್ತಿಲ್ಲಾ. ಅಡುಗೆ ಮಾಡಲು ಮನೆಯಲ್ಲಿ ಯಾರೂ ಇಲ್ಲ. ಮದುವೆಯಾಗುವ ಆಸೆಯಾಗಿದ್ದು, ಕನ್ಯೆ ಹುಡುಕಿ ಮದುವೆ ಮಾಡಿಸಿ ಎಂದು ಎಂದು ದ್ಯಾಮಣ್ಣಾ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾನೆ.

ಈ ಮನವಿಯಿಂದ ಗ್ರಾಮ ಪಂಚಾಯತ್ ಸಿಬ್ಬಂದಿ ಕೆಲಕಾಲ ಆಶ್ಚರ್ಯಚಕಿತರಾಗಿದ್ದಾರೆ. ಗ್ರಾಮ ಪಂಚಾಯತ್​ ಕಾರ್ಯದರ್ಶಿ ಸೋಮಣ್ಣ ಬಾರ್ಕಿ ಮನವಿ ಸ್ಪೀಕರಿಸಿ ಬಳಿಕ ಈ ವರನಿಗೆ ಸಮಾಧಾನ ಹೇಳಿ ಕಳಿಸಿದ್ದಾರೆ.

ABOUT THE AUTHOR

...view details