ಕರ್ನಾಟಕ

karnataka

Margadarsi 110th Branch: ಹಾವೇರಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಆರಂಭ

By ETV Bharat Karnataka Team

Published : Oct 16, 2023, 10:49 AM IST

Updated : Oct 16, 2023, 4:00 PM IST

Margadarsi 110th Branch: ಹಾವೇರಿ ನಗರದಲ್ಲಿ ಮಾರ್ಗದರ್ಶಿಯ ನೂತನ ಶಾಖೆ ಆರಂಭವಾಗಿದೆ.

Margadarsi 110th Branch
Margadarsi 110th Branch

ಹಾವೇರಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಆರಂಭ

ಹಾವೇರಿ: ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್​​​​​ನ ಮತ್ತೊಂದು ಶಾಖೆ ಉದ್ಘಾಟನೆಗೊಂಡಿದೆ. ರಾಜ್ಯದಲ್ಲಿ ಇದು 23ನೇ ಶಾಖೆಯಾಗಿದ್ದು, ದೇಶಾದ್ಯಂತ 110ನೇ ಶಾಖೆಯಾಗಿದೆ. ಮಾರ್ಗದರ್ಶಿ ಚಿಟ್ಸ್ (ಕರ್ನಾಟಕ) ಪ್ರೈವೇಟ್​ ಲಿಮಿಟೆಡ್​ ನಿರ್ದೇಶಕ ಪಿ ಲಕ್ಷಣರಾವ್, ಈ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು.

ಇಲ್ಲಿನ ಪಿಬಿ ರೋಡ್​ನಲ್ಲಿರುವ ಜಿಜಿ ಮಾಗಾವಿ ಚೇಂಬರ್ಸ್​ ಕಾಂಪ್ಲೆಕ್ಸ್​ನ ಎರಡನೇ ಮಹಡಿಯಲ್ಲಿ ಮಾರ್ಗದರ್ಶಿ ಚಿಟ್ಸ್​ನ ಶಾಖೆ ಆರಂಭವಾಗಿದೆ. ನೂತನ ಶಾಖೆಯ ಮೂಲಕ ಹಾವೇರಿ ಜಿಲ್ಲೆಯ ಜನರು ಕೂಡ ಮಾರ್ಗದರ್ಶಿ ಚಿಟ್ಸ್​ ಸಂಸ್ಥೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಸಂಸ್ಥೆಯು ತನ್ನ ಚೀಟಿ ಸೇವೆಗಳನ್ನು ನೀಡಲು ಬದ್ಧವಾಗಿದೆ.

ಇನ್ನು, ಈ ಬಗ್ಗೆ ಮಾತನಾಡಿದ ಮಾರ್ಗದರ್ಶಿ ಚಿಟ್ಸ್ (ಕರ್ನಾಟಕ) ಪ್ರೈವೇಟ್​ ಲಿಮಿಟೆಡ್​ ನಿರ್ದೇಶಕ ಪಿ ಲಕ್ಷಣರಾವ್, ಇಂದು ಮಾರ್ಗದರ್ಶಿ ಚಿಟ್ಸ್ ಹಾವೇರಿಯಲ್ಲಿ ತನ್ನ ಹೊಸ ಶಾಖೆಯನ್ನು ಉದ್ಘಾಟಿಸಿದೆ ಎಂದು ಹೇಳಲು ನನಗೆ ಅಪಾರ ಸಂತೋಷವಾಗಿದೆ. ಇದು ಕಂಪನಿಯ 110ನೇ ಶಾಖೆ ಮತ್ತು ಕರ್ನಾಟಕ ರಾಜ್ಯದ 23ನೇ ಶಾಖೆ ಆಗಿದೆ. ನಮ್ಮ ಶಿಸ್ತು ಬದ್ಧ ಮತ್ತು ವಿಶ್ವಾಸಾರ್ಹ ಕಂಪನಿಯಿಂದ ಚಿಟ್​ ಸೌಲಭ್ಯಗಳನ್ನು ಪಡೆಯಲು ಹಾವೇರಿ ಜಿಲ್ಲೆಯ ಸಾರ್ವಜನಿಕರನ್ನು ನಾವು ವಿನಮ್ರವಾಗಿ ಆಹ್ವಾನಿಸುತ್ತೇವೆ ಎಂದು ಹೇಳಿದರು.

ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಉದ್ಘಾಟನೆ

ಇಲ್ಲಿಯವರೆಗೆ ಹಾವೇರಿ ಶಾಖೆಯು ರೂ.15 ಕೋಟಿಗಳ ವ್ಯವಹಾರವನ್ನು ಸಂಗ್ರಹಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ನಾವು ರೂ.20 ಕೋಟಿಗಿಂತ ಹೆಚ್ಚಿನ ವ್ಯವಹಾರವನ್ನು ನಿರೀಕ್ಷಿಸುತ್ತಿದ್ದೇವೆ. ಮ್ಯಾನೇಜರ್​ ಶ್ರೀ ಕೊಟ್ರಪ್ಪ ಬಣಕಾರ್​ ತಂಡದ ಕೆಲಸದಿಂದ ಮೂರು ತಿಂಗಳಲ್ಲಿ ಈ ಗುರಿಯನ್ನು ಸಾಧಿಸಿದ್ದಾರೆ ಎಂದು ಹೇಳಿದರು.

ಹಾವೇರಿ ಶಾಖೆಯು 25, 30, 40 ಮತ್ತು 50 ತಿಂಗಳ ಚಿಟ್​ ಅವಧಿಯ ಚಿಟ್​ ಗ್ರೂಪ್​ ಮೌಲ್ಯಗಳನ್ನು ತಿಂಗಳಿಗೆ 2 ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳ ಚಂದಾದಾರಿಕೆಯೊಂದಿಗೆ 1 ಲಕ್ಷ ರೂಪಾಯಿಗಳಿಂದ 25 ಲಕ್ಷ ರೂಪಾಯಿಗಳವರೆಗೆ ತೆರೆದಿದೆ. ಹಾವೇರಿ ಶಾಖೆಯು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಹೊಸ ಚಿಟ್​ ಗುಂಪುಗಳನ್ನು ಪ್ರಾರಂಭಿಸಲಿದೆ ಎಂದು ತಿಳಿಸಲು ನಾವು ಸಂತೋಷ ಪಡುತ್ತೇವೆ. ಇದು ಹಾವೇರಿಯ ಎಲ್ಲ ವರ್ಗದ ಚಂದಾದಾರರಿಗೆ ಸೂಕ್ತವಾಗಿರುತ್ತದೆ ಎಂದು ಲಕ್ಷಣರಾವ್​ ತಿಳಿಸಿದರು.

ಈ ಹಣಕಾಸು ವರ್ಷದ ಅಂತ್ಯದ ಮೊದಲು ಕರ್ನಾಟಕದ ಇತರ ಎರಡು ಸ್ಥಳಗಳಲ್ಲಿ ಶಾಖೆಗಳನ್ನು ವಿಸ್ತರಿಸಲು ನಾವು ಮುಂದುವರಿಯುತ್ತಿದ್ದೇವೆ. ಕರ್ನಾಟಕ ಜನರಿಗೆ ಅತ್ಯುತ್ತಮ ಚಿಟ್​ ಸೇವೆಗಳನ್ನು ಒದಗಿಸಲು, ಮಾರ್ಗದಶಿ ಯಾವಾಗಲೂ ಅವರ ವಿಶ್ವಾಸಾರ್ಹ ಕಂಪನಿಯಾಗಲು ಮತ್ತು ಅವರ ಹಣಕಾಸಿನ ಅಗತ್ಯಗಳಿಗೆ ಉತ್ತಮ ಹಣಕಾಸು ಪಾಲುದಾರನಾಗಿ ನಿಲ್ಲಲು ಮುಂದಿರುತ್ತದೆ ಎಂದು ನಿರ್ದೇಶಕ ಲಕ್ಷಣರಾವ್​ ವಿವರಿಸಿದರು.

ಚಿಟ್ಸ್​ ಫಂಡ್​ ಜೊತೆ ಅವಿನಾಭವ ಸಂಬಂಧವಿದೆ:ನಮಗೂ ಮತ್ತು ಮಾರ್ಗದರ್ಶಿ ಚಿಟ್ಸ್​ ಫಂಡ್​ಗೆ ಅವಿನಾಭವ ಸಂಬಂಧವಿದೆ. ಕಳೆದ 15 ವರ್ಷಗಳಿಂದ ನಾವು ಮಾರ್ಗದರ್ಶಿ ಚಿಟ್ಸ್​ ಫಂಡ್​ನಲ್ಲಿ ಹೂಡಿಕೆ ಮಾಡುತ್ತಲೇ ಇದ್ದೆವೆ. ಇಲ್ಲಿಯವರೆಗೆ ನಮಗೆ ಒಳ್ಳೆಯ ಸಹಕಾರವನ್ನು ಮಾರ್ಗದರ್ಶಿ ಚಿಟ್ಸ್​ ಫಂಡ್​ ಅವರು ಕೊಟ್ಟಿದ್ದಾರೆ. ಹಾವೇರಿಯಲ್ಲಿ ಶಾಖೆ ಆರಂಭಗೊಂಡಿರುವುದು ಸಂತೋಷದ ವಿಷಯ. ಈ ಶಾಖೆ ಇನ್ನಷ್ಟು ಅಭಿವೃದ್ಧಿ ಹೊಂದಲಿ, ಸಾರ್ವಜನಿಕರಿಗೆ ಮತ್ತು ಗ್ರಾಹಕರಿಗೆ ಉತ್ತಮ ಮಾರ್ಗದರ್ಶನ, ಉತ್ತಮ ಸಹಕಾರ, ಉತ್ತಮ ಹಣಕಾಸಿನ ಸಹಾಯ, ಉತ್ತಮ ವ್ಯವಸ್ಥೆಯನ್ನು ಮಾಡಲಿ ಎಂಬುದು ಆಸೆ ನಮ್ಮದು ಎಂದು ಮಾರ್ಗದರ್ಶಿ ಚಂದಾದಾರರಾಗಿರುವ ವಿಜಯ್​ ಚಿನ್ನಿಕಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

110ನೇ ಶಾಖೆ ಹಾವೇರಿಯಲ್ಲಿ ಆರಂಭಿಸುತ್ತಿರುವುದು ತುಂಬಾ ಸಂತೋಷಕರವಾದ ವಿಷಯವಾಗಿದೆ. ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸಬೇಕು. ಗ್ರಾಹಕರಿಗೆ ಹೆಚ್ಚು ಲಾಭ ಕೊಡುವಂತೆ ಸಂಸ್ಥೆ ಇದು ಆಗಿರುವುದರಿಂದ 110ನೇ ಬ್ರಾಂಚ್​ ಆರಂಭವಾಗಿದೆ ಎಂಬುದು ನನ್ನ ಅನುಭವ ಎಂದು ಚಿನ್ನಿಕಟ್ಟಿ ಹೇಳಿದರು.

ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಉದ್ಘಾಟನೆ

ನಾವು ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಸಾಕಷ್ಟು ಚಿಟ್ಸ್​ ಫಂಡ್​ ಕಂಪನಿಗಳನ್ನು ನೋಡಿದ್ದೇವೆ. ಎಷ್ಟೋ ಚಿಟ್ಸ್​ ಫಂಡ್​ಗಳು ಗ್ರಾಹಕರಿಗೆ ಅನ್ಯಾಯವನ್ನು ಮಾಡಿ ಅರ್ಧಕ್ಕೆ ಓಡಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ 110ನೇ ಶಾಖೆ ಆರಂಭಗೊಂಡಿರುವುದು ಗ್ರಾಹಕರು ಈ ಒಂದು ಸಂಸ್ಥೆಯ ಮೇಲೆ ಇಟ್ಟಂತಹ ನಂಬಿಕೆ ಆಗಿದೆ. ಈ ಕಂಪನಿ ಉತ್ತಮವಾಗಿ ಬೆಳೆಯಲಿ, ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡಲಿ ಎಂದು ನಾನು ಆಶೀಸುತ್ತೇನೆ ಅಂತಾ ಚಿನ್ನಕಟ್ಟಿ ಅವರು ತಮ್ಮ ಅನಿಸಿಕೆಯನ್ನು ಈಟಿವಿ ಭಾರತ ಜೊತೆ ಹಂಚಿಕೊಂಡರು.

ಸ್ಥಳೀಯರ ಅಭಿಪ್ರಾಯವೇನು?: ನಾನು ಕಳೆದ 16 ರಿಂದ 17 ವರ್ಷಗಳಿಂದ ಮಾರ್ಗದರ್ಶಿ ಜೊತೆ ವ್ಯವಹಾರ ನಡೆಸುತ್ತಿದ್ದೇನೆ. ಮಾರ್ಗದರ್ಶಿಯಿಂದ ನಮಗೆ ಯಾವಾಗಲೂ ತೊಂದರೆಯಾಗಿಲ್ಲ. ನಮಗೆ ಈ ಕಂಪನಿ ಮೇಲೆ ತುಂಬಾ ವಿಶ್ವಾಸವಿದೆ. ನನ್ನ ವ್ಯವಹಾರ ಅಭಿವೃದ್ಧಿಗೊಳ್ಳಲು ಸಹ ಮಾರ್ಗದರ್ಶಿಯೊಂದು ದೊಡ್ಡ ಕಾರಣ. ಹಾವೇರಿಯಲ್ಲಿ ಶಾಖೆ ಉದ್ಘಾಟಿಸಿರುವುದು ಖುಷಿ ತಂದಿದೆ ಎಂದು ಸ್ಥಳೀಯ ಚಂದಾದಾರ ಶಂಕರ್​ ಬಿಸರಳ್ಳಿ ಅವರು ಹೇಳಿದರು.

ವ್ಯವಹಾರ ಸುಲಭ: ನನಗೆ ಕಳೆದ 12 ವರ್ಷಗಳ ಹಿಂದೆ ಮಾರ್ಗದರ್ಶಿ ಬಗ್ಗೆ ತಿಳಿದಿತ್ತು. ಬಳ್ಳಾರಿಯಲ್ಲಿದ್ದ ನಮ್ಮ ಪರಿಚಯಸ್ಥರು ಮಾರ್ಗದರ್ಶಿಯಲ್ಲಿ ಚೀಟಿ ಹಾಕುತ್ತಿದ್ದರು. ಈ ಮೂಲಕ ನನಗೆ ಮಾರ್ಗದರ್ಶಿ ಪರಿಚಯ ಎಂದು ಚಂದಾದಾರ ಆರ್​ ನಾಗರಾಜ್​ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ನನಗೆ ಉಳಿದ ಚೀಟಿಗಳ ಬಗ್ಗೆ ನಂಬಿಕೆಯಿಲ್ಲ. ನನಗೆ ಮೊದಲನಿಂದಲೂ ಮಾರ್ಗದರ್ಶಿ ಬಗ್ಗೆ ಹೆಚ್ಚು ನಂಬಿಕೆ ಇದೆ. ಹೀಗಾಗಿ ನಾನು ಮೊದಲಿನಿಂದಲೂ ಮಾರ್ಗದರ್ಶಿ ಜೊತೆಯೇ ವ್ಯವಹಾರ ನಡೆಸುತ್ತಿದ್ದೇನೆ. ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರವಾಗಲಿ ನಾಲ್ಕು ರಾಜ್ಯಗಳಲ್ಲಿ ಎಲ್ಲಿಯೂ ಸಮಸ್ಯೆ ತಲೆದೂರಿಲ್ಲ. ಸುಮಾರು ವರ್ಷಗಳಿಂದ ಇದು ನಡೆಯುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ವಿಶ್ವಾಸದಿಂದ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಇದರ ಮೇಲೆ ನಮಗೂ ತುಂಬಾ ನಂಬಿಕೆ ಇದೆ ಎಂದು ನಾಗರಾಜ್​ ಅವರು ಹೇಳಿದರು.

ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಉದ್ಘಾಟನೆ

ಮಾರ್ಗದರ್ಶಿಗೆ 61 ವರ್ಷ ಪೂರ್ಣ: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರು ಸ್ಥಾಪಿಸಿದ ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆಗೆ ಅಕ್ಟೋಬರ್​ 1 ರಂದು 61 ವರ್ಷಗಳು ತುಂಬಿವೆ. ಎಂಡಿ ಶೈಲಜಾ ಕಿರಣ್ ಅವರ ನಾಯಕತ್ವದಲ್ಲಿ ಮಾರ್ಗದರ್ಶಿ ಸಂಸ್ಥೆ ಪ್ರಚಂಡ ಬೆಳವಣಿಗೆ ಸಾಧಿಸಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ 110 ಶಾಖೆಗಳಲ್ಲಿ 4,300ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 60 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಮಾರ್ಗದರ್ಶಿ ಹೊಂದಿದೆ.

1962ರಲ್ಲಿ ಕೇವಲ ಇಬ್ಬರು ಉದ್ಯೋಗಿಗಳೊಂದಿಗೆ ಪ್ರಾರಂಭವಾಗಿದ್ದ ಮಾರ್ಗದರ್ಶಿ ಚಿಟ್​ ಫಂಡ್​ ಸಂಸ್ಥೆ ಪ್ರಸ್ತುತ ಸಾವಿರಾರು ಉದ್ಯೋಗಿಗಳನ್ನು ಹೊಂದಿದೆ. ತೆಲಂಗಾಣ, ಆಂಧ್ರ ಪ್ರದೇಶದ ಜೊತೆಗೆ ತಮಿಳುನಾಡು, ಕರ್ನಾಟಕದಲ್ಲೂ ಉತ್ತಮ ನೆಟ್​ವರ್ಕ್​ ಗಳಿಸಿದೆ. ಒಟ್ಟಾರೆ 110 ಶಾಖೆಗಳೊಂದಿಗೆ ಇದು ಪ್ರಮುಖ ಕಂಪನಿಯಾಗಿ ಹೊರಹೊಮ್ಮಿದೆ.

ಕೋಲಾರದಲ್ಲಿ ಮಾರ್ಗದರ್ಶಿ ಶಾಖೆ:ಆಗಸ್ಟ್​ 21ರಂದು ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್​​​​​ನ 22ನೇ ಶಾಖೆ ಉದ್ಘಾಟನೆಗೊಂಡಿತ್ತು. ಸಂಸ್ಥೆಯ ಒಟ್ಟಾರೆ 109 ನೇ ಶಾಖೆ ಇದಾಗಿತ್ತು. ಕಂಪನಿ ಎಂಡಿ ಶೈಲಜಾ ಕಿರಣ್ ಅವರು ಈ ಶಾಖೆಯನ್ನು ವರ್ಚುಯಲ್​ ಆಗಿ ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು.

ಓದಿ:ಕೋಲಾರದಲ್ಲಿ ಮಾರ್ಗದರ್ಶಿ ಚಿಟ್ಸ್​​​ನ 109ನೇ ಶಾಖೆ ಉದ್ಘಾಟನೆ

Last Updated : Oct 16, 2023, 4:00 PM IST

ABOUT THE AUTHOR

...view details