ರಾಣೆಬೆನ್ನೂರು: ಲಾಕ್ಡೌನ್ನಿಂದಾಗಿ ತಾಲೂಕಿನ ವೈ.ಟಿ.ಹೊನ್ನತ್ತಿ ಗ್ರಾಮದದಲ್ಲಿ ರೈತರು ಬೆಳದಿದ್ದ ಪಪ್ಪಾಯಿ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಜಮೀನಿನಲ್ಲೇ ಕೊಳೆತು ಹೋಗುತ್ತಿವೆ.
ಪಪ್ಪಾಯಿ ಬೆಳೆ ನಷ್ಟ...ಪರಿಹಾರಕ್ಕೆ ರೈತ ಮನವಿ - Corona virus phobia
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಾರಿಗೆ ತಂದಿರುವ ಲಾಕ್ಡೌನ್ನಿಂದಾಗಿ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ, ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಹೊಂದುತ್ತಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಪಪ್ಪಾಯಿ ಬೆಳೆ ನಷ್ಟ
ಗುಡ್ಡಪ್ಪ ಕುಲಕರ್ಣಿ ಎಂಬವರು 3 ಎಕರೆ ಜಮೀನಿನಲ್ಲಿ ಪಪ್ಪಾಯಿ ನೆಟ್ಟು ಫಸಲು ಪಡೆದಿದ್ದಾರೆ. ಆದರೀಗ ಬೆಳೆದ ಬೆಳೆ ಸಂಪೂರ್ಣ ನಾಶವಾಗುವ ಹಂತ ತಲುಪಿದೆ.
ಕೊರೊನಾ ತಡೆಗೆ ಲಾಕ್ಡೌನ್ ಹೇರಿದ ಪರಿಣಾಮ ಎಲ್ಲವೂ ಹಣ್ಣಾಗಿ ನೆಲಕ್ಕೆ ಉದುರುತ್ತಿವೆ. ಹೀಗಾಗಿ ರೈತ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಹೀಗಾಗಿ ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.