ಹಾವೇರಿ:ಲಾಕ್ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಇಂದು ಜನರ ಓಡಾಟ ಸಂಪೂರ್ಣ ಬಂದ್ ಆಗಿತ್ತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಕಣ್ಗಾವಲು ಹಾಕಲಾಗಿತ್ತು.
ಲಾಕ್ಡೌನ್ ಎಫೆಕ್ಟ್: ಜನರಿಲ್ಲದೇ ಖಾಲಿ ಖಾಲಿಯಾದ ಹಾವೇರಿ ನಗರ - ರಸ್ತೆಗಳು ಜನರಿಂದ ಮುಕ್ತ
ಲಾಕ್ಡೌನ್ನಿಂದಾಗಿ ಇಂದು ಜಿಲ್ಲೆಯಲ್ಲಿ ಜನಸಂಚಾರ ವಿರಳವಾಗಿತ್ತು. ವಾಹನ ಸವಾರರ ಹೆಲ್ಮೆಟ್, ಮಾಸ್ಕ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಸೂಕ್ತ ದಾಖಲಾತಿ ಇಲ್ಲದ ವಾಹನ ಸವಾರರಿಗೆ 500 ರೂಪಾಯಿ ದಂಡ ವಸೂಲಿ ಮಾಡಲಾಯಿತು.
ಲಾಕ್ಡೌನ್ ಎಫೆಕ್ಟ್: ಜನರಿಲ್ಲದೆ ಖಾಲಿ ಖಾಲಿಯಾದ ಹಾವೇರಿ ನಗರ
ವಾಹನ ಸವಾರರ ಹೆಲ್ಮೆಟ್, ಮಾಸ್ಕ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಸೂಕ್ತ ದಾಖಲಾತಿ ಇಲ್ಲದ ವಾಹನ ಸವಾರರಿಗೆ 500 ರೂಪಾಯಿ ದಂಡ ವಸೂಲಿ ಮಾಡಲಾಯಿತು.