ರಾಣೆಬೆನ್ನೂರು:ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿ ಸಮುದಾಯದ ವತಿಯಿಂದ ನಗರದ ಅಂಚೆ ಕಚೇರಿಯ ಮುಂಭಾಗ ಪತ್ರ ಚಳುವಳಿ ನಡೆಸಲಾಯಿತು.
ಎಸ್ಸಿ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿ ರಾಣೆಬೆನ್ನೂರಿನಲ್ಲಿ ಪತ್ರ ಚಳುವಳಿ - ಕೊರಚ
ಲಂಬಾಣಿ, ಭೋವಿ, ಕೊರಚ ಹಾಗು ಕೊರಮ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿ ರಾಣೆಬೆನ್ನೂರಿನಲ್ಲಿ ಸಮುದಾಯದವರು ಪತ್ರ ಚಳುವಳಿ ನಡೆಸಿದ್ದಾರೆ.
ರಾಣೆಬೆನ್ನೂರಿನಲ್ಲಿ ಪತ್ರ ಚಳುವಳಿ
ಲಂಬಾಣಿ ಸಮುದಾಯದ ಯುವ ಮುಖಂಡ ಬೀರಪ್ಪ ಲಮಾಣಿ ಮಾತನಾಡಿ, ಎಸ್ಸಿ ಸಮುದಾಯದ ಅತಿ ಹಿಂದುಳಿದ ವರ್ಗಗಳಾದ ಕೊರಮ, ಕೊರಚ, ಲಂಬಾಣಿ ಜನರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ನಡುವೆ ಕೆಲವರು ಹುನ್ನಾರ ನಡೆಸಿ ಎಸ್ಸಿ ಪಟ್ಟಿಯಿಂದ ಈ ಜಾತಿಗಳನ್ನು ಬಿಡಬೇಕು ಎಂದು ಸುಪ್ರೀಂಕೋರ್ಟ್ ಹೋಗಿದ್ದಾರೆ. ದಯಮಾಡಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ಜಾತಿಗಳನ್ನು ಪಟ್ಟಿಯಿಂದ ಕೈ ಬಿಡಬಾರದು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಎಸ್ಸಿ ಪಟ್ಟಿಯಿಂದ ಕೈಬಿಟ್ಟರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.