ಕರ್ನಾಟಕ

karnataka

ETV Bharat / state

ದೂರು ಕೊಡಲು ಹೋದ ವಕೀಲನ ಮೇಲೆ ಪಿಎಸ್ಐಯಿಂದ ಹಲ್ಲೆ : ಕಾಂಗ್ರೆಸ್​ ಕಾರ್ಯಕರ್ತರ ಆರೋಪ - ETV Bharath Kannada news

ವಕೀಲನ ಮೇಲೆ ಪಿಎಸ್ಐ ಹಲ್ಲೆ ಮಾಡಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರ ಆರೋಪ - ಹಾನಗಲ್​ ಠಾಣೆ ಎದುರು ಪ್ರತಿಭಟನೆ - ಎಸ್​ಪಿಯಿಂದ ತನಿಖೆಯ ಭರವಸೆ

lawyer-assaulted-by-psi-allegation
ಸಾರ್ವಜನಿಕರ ಆರೋಪ

By

Published : Dec 28, 2022, 9:03 AM IST

Updated : Dec 28, 2022, 10:57 AM IST

ವಕೀಲನ ಮೇಲೆ ಪಿಎಸ್ಐ ಹಲ್ಲೆ ಮಾಡಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರ ಆರೋಪ

ಹಾವೇರಿ:ಜಿಲ್ಲೆ ಹಾನಗಲ್ ಪೊಲೀಸ್ ಠಾಣೆಯ ಪಿಎಸ್ಐ ವಕೀಲ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಹಾನಗಲ್ ಪೊಲೀಸ್ ಠಾಣೆಯ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಶಿವು ತಳವಾರ ಎಂಬ ವಕೀಲನ ಮೇಲೆ ಹಾನಗಲ್ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ.

ಪೊಲೀಸ್ ಠಾಣೆಗೆ ಕೇಸ್ ಕೊಡಲು ಬಂದಾಗ ಮಾತಿಗೆ ಮಾತು ಬೆಳೆದು ಪಿಎಸ್ಐ ವಕೀಲನ ಮಾಡಿದ್ದಾರೆ ಎನ್ನಲಾಗ್ತಿದೆ.‌ ಹಲ್ಲೆಗೆ ಒಳಗಾಗಿರುವ ವಕೀಲ ಶಿವು ತಳವಾರ ಕಾಂಗ್ರೆಸ್ ಮುಖಂಡನಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್ಐ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲಾಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು. ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹಾನಗಲ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆದಿದ್ದು, ಸ್ಥಳಕ್ಕೆ ಎಸ್​ಪಿ ಹನುಮಂತರಾಯ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಪ್ರಕರಣ ತನಿಖೆ ನಡೆಸಿ ಹಲ್ಲೆ ಮಾಡಿದ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಆನೇಕಲ್: ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್ ಗ್ಯಾಂಗ್​

Last Updated : Dec 28, 2022, 10:57 AM IST

ABOUT THE AUTHOR

...view details