ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನವರು ಮಂಗಳೂರಿಗೆ ಹೊರಟಿದ್ದು ಸಾಂತ್ವನ ಹೇಳಲು ಅಲ್ಲ, ಬೆಂಕಿ ಹಚ್ಚಲು: ಈಶ್ವರಪ್ಪ ವಾಗ್ದಾಳಿ

ಕಾಂಗ್ರೆಸ್​ನವರು ದೇಶವನ್ನು ಒಡೆಯುವ ಪ್ರಯತ್ನದಲ್ಲಿದ್ದು, ಸದ್ಯ ಅವರು ಮಂಗಳೂರಿಗೆ ಹೊರಟಿದ್ದು ಸಾಂತ್ವನ ಹೇಳಲು ಅಲ್ಲ, ಬೆಂಕಿ ಹಚ್ಚಲು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

KS Eshwarappa
ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

By

Published : Dec 22, 2019, 4:28 PM IST

ಹಾವೇರಿ:ಕಾಂಗ್ರೆಸ್​ನವರಿಗೆ ದೇಶ ಒಂದಾಗೋದು ಬೇಕಾಗಿಲ್ಲ. ಅವರು ಮಂಗಳೂರಿಗೆ ಹೊರಟಿದ್ದು ಸಾಂತ್ವನ ಹೇಳಲು ಅಲ್ಲ, ಬೆಂಕಿ ಹಚ್ಚಲು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ನವರು ಮಂಗಳೂರಿಗೆ ಹೊರಟಿದ್ದು ಸಾಂತ್ವನ ಹೇಳಲು ಅಲ್ಲ, ಬೆಂಕಿ ಹಚ್ಚಲು....ಕೆ.ಎಸ್​ ಈಶ್ವರಪ್ಪ ವಾಗ್ದಾಳಿ

ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ. ಸಿದ್ದರಾಮಯ್ಯ ಹಾಗೂ ಖಾದರ್​ ಸೇರಿ ಕೆಲವರು ಬೆಂಕಿ ಹಚ್ಚಬೇಕಾಗುತ್ತೆ ಅನ್ನೋ ಮಾತುಗಳನ್ನಾಡುತ್ತಿದ್ದಾರೆ. ಗಲಭೆ ಸೃಷ್ಟಿಸುವ ತೀರ್ಮಾನ ಕಾಂಗ್ರೆಸ್​ನವರು ಮಾಡಿದ್ದಾರೆ. ಈಗಾಗಲೇ ಎರಡು ಹೆಣಗಳು ಬಿದ್ದಿದ್ದು, ಇನ್ನೆಷ್ಟು ಹೆಣಗಳು ಬೀಳಬೇಕೋ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಈಗಿನ ಕಾಂಗ್ರೆಸ್​ನವರು ಹಿಂದೂ ಮುಸ್ಲಿಂ ಧರ್ಮವನ್ನ ಒಡೆದು ಛಿದ್ರ-ಛಿದ್ರ ಮಾಡೋ ಪ್ರಯತ್ನ ಮಾಡ್ತಿದ್ದಾರೆ. ಪೌರತ್ವ ಕಾಯ್ದೆ ಸಂಪೂರ್ಣ ದೇಶವನ್ನ ಒಂದು ಮಾಡುತ್ತೆ. ಕಾಂಗ್ರೆಸ್​ನವರು ಇದನ್ನ ದುರುಪಯೋಗ ಮಾಡಿಕೊಂಡು ಗಲಭೆ ಸೃಷ್ಟಿಸಲು ಪ್ರಯತ್ನ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ‌ವಿರುದ್ಧ ಕಿಡಿಕಾರಿದ್ರು.

ABOUT THE AUTHOR

...view details