ರಾಣೆಬೆನ್ನೂರು: ರಾಜ್ಯದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಕ್ರಮವಾಗಿ ಮಾರ್ಚ್ 31ರವರೆಗೂ ಲಾಕ್ಡೌನ್ ಮಾಡುವ ಹಿನ್ನೆಲೆ ರಾಣೆಬೆನ್ನೂರು ಜನತೆ ಅಗತ್ಯ ವಸ್ತುಗಳಿಗೆ ಮುಗಿಬಿದ್ದಿದ್ದಾರೆ.
ಕರ್ನಾಟಕ ಲಾಕ್ ಡೌನ್: ಅಗತ್ಯ ವಸ್ತುಗಳಿಗೆ ಮುಗಿಬಿದ್ದ ರಾಣೆಬೆನ್ನೂರು ಜನತೆ
ನಾಳೆಯಿಂದ ರಾಜ್ಯ ಬಂದ್ ಆಗುವ ಕಾರಣ ಹಬ್ಬಕ್ಕೆ ಹೊಸ ಬಟ್ಟೆ ಅಂಗಡಿಗಳಲ್ಲಿ, ಹೂವಿನ ವ್ಯಾಪಾರ ಸಹ ಬಲು ಜೋರಾಗಿತ್ತು.
ಕರ್ನಾಟಕ ಲಾಕ್ ಡೌನ್
ನಗರದ ತರಕಾರಿ ಮಾರುಕಟ್ಟೆ, ಎಂಜಿ ರಸ್ತೆ, ನೆಹರೂ ಮಾರುಕಟ್ಟೆಯಲ್ಲಿ ಸಾವಿರಾರು ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು.
ತಾಲೂಕಿನ ರೈತರು ವಿಜೃಂಭಣೆಯಿಂದ ಆಚರಿಸುವ ಯುಗಾದಿ ಹಬ್ಬಕ್ಕೆ ಹೊಸ ವಸ್ತುಗಳನ್ನು ಖರೀದಿಸುವ ವಾಡಿಕೆಯಿದೆ. ಇದರಿಂದ ಮನೆಗೆ ಬೇಕಾದ ವಸ್ತುಗಳ ಖರೀದಿ ಮಾಡಿದರು.