ಕರ್ನಾಟಕ

karnataka

ETV Bharat / state

ಅಕ್ರಮ ಮರಳು ಸಾಗಣೆ: ವಾಹನಗಳನ್ನು ವಶಕ್ಕೆ ಪಡೆದ ರಾಣೆಬೆನ್ನೂರು ಪೊಲೀಸರು - Illegal sand trafficking

ರಾಣೆಬೆನ್ನೂರು ತಾಲೂಕಿನ ಚಿಕ್ಕಕುರವತ್ತಿ ಮತ್ತು ಮೇಡ್ಲೇರಿ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯ ತಟದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕ್ಯಾಂಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ರಾಣೆಬೆನ್ನೂರು ಗ್ರಾಮಾಂತರ ‌ಪೊಲೀಸರು ದಾಳಿ ಮಾಡಿದ್ದಾರೆ.

vehicles seized
ಅಕ್ರಮ ಮರಳು ಸಾಗಾಟ: ವಾಹನಗಳನ್ನು ವಶಪಡಿಸಿಕೊಂಡ ರಾಣೆಬೆನ್ನೂರು ಪೊಲೀಸರು

By

Published : Dec 14, 2020, 5:50 PM IST

ರಾಣೆಬೆನ್ನೂರು:ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಒಂದು ಲಾರಿ ಹಾಗೂ‌ ಎರಡು ಕ್ಯಾಂಟರ್​ಗಳನ್ನು ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಮರಳು ಸಾಗಣೆ: ವಾಹನಗಳನ್ನು ವಶಪಡಿಸಿಕೊಂಡ ರಾಣೆಬೆನ್ನೂರು ಪೊಲೀಸರು

ಕಳೆದ ರಾತ್ರಿ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರವತ್ತಿ ಮತ್ತು ಮೇಡ್ಲೇರಿ ಗ್ರಾಮದ ಬಳಿ ತುಂಗಭದ್ರಾ ನದಿಯ ತಟದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಎತ್ತಿ ಸಾಗಾಟ ಮಾಡುತ್ತಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ರಾಣೆಬೆನ್ನೂರು ಗ್ರಾಮಾಂತರ ‌ಪೊಲೀಸರು ದಾಳಿ ಮಾಡಿ ಹಾವೇರಿ ತಾಲೂಕಿನ ಗುತ್ತಲ ಗ್ರಾಮದ ಸೈಪುಲ್ಲಾ ಎಂಬುವವರಿಗೆ ಸೇರಿದ ಲಾರಿ ಮತ್ತು ಮೇಡ್ಲೇರಿ ಗ್ರಾಮದ ಎರಡು ಕ್ಯಾಂಟರ್​ಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ರಾಣೆಬೆನ್ನೂರು ಗ್ರಾಮಾಂತರ ಠಾಣೆಯ ಸಿಪಿಐ ಭಾಗ್ಯವತಿ ಬಂತಿ, ಪಿಎಸ್ಐ ವಸಂತ, ಸಿಬ್ಬಂದಿ ಮೋಹನ ಮೇಲಗಿರಿ, ಎಸ್.ಡಿ. ಗೊರವರ ಇದ್ದರು.

ABOUT THE AUTHOR

...view details