ಹಾವೇರಿ: ನಿರಂತರ ಮಳೆಯಿಂದಾಗಿ ಧರ್ಮಾ ನದಿಯ ನೀರು ದೇವಸ್ಥಾನಕ್ಕೆ ನುಗ್ಗಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ನಡೆದಿದೆ.
ಹಾವೇರಿಯಲಲ್ಲಿ ಮಳೆ ಅವಾಂತರ.. ದೇವಸ್ಥಾನಕ್ಕೆ ನುಗ್ಗಿದ ನೀರು.. ಬೆಳೆದ ಬೆಳೆಯೂ ಹಾಳು.. - ವರದಾ ನದಿ
ಬಿಡದೇ ಸುರಿಯುತ್ತಿರುವ ಮಳೆಗೆ ಹೊಂಬಳಿ ಗ್ರಾಮದ ಬಸವಣ್ಣನ ದೇವಸ್ಥಾನಕ್ಕೆ ಧರ್ಮಾ ನದಿ ನೀರು ನುಗ್ಗಿದ್ದು, ಬಸವಣ್ಣನ ಮೂರ್ತಿ ಜಲಾವೃತಗೊಂಡಿದೆ.
ಗ್ರಾಮದ ಬಸವಣ್ಣನ ದೇವಸ್ಥಾನಕ್ಕೆ ಧರ್ಮಾ ನದಿ ನೀರು ನುಗ್ಗಿದ್ದು, ಬಸವಣ್ಣನ ಮೂರ್ತಿ ಜಲಾವೃತಗೊಂಡಿದೆ. ದೇವಸ್ಥಾನದಲ್ಲಿ ನೀರು ತುಂಬಿ, ಬಸವಣ್ಣನ ಮೂರ್ತಿ ಜಲಾವೃತವಾಗಿದ್ದು ದೇವಸ್ಥಾನದ ಪೂಜಾರಿ ಮತ್ತು ಭಕ್ತರು ದೇವರಿಗೆ ಪೂಜೆ ಸಲ್ಲಿಸಿದ್ರು. ಗ್ರಾಮದ ರೈತರ ಜಮೀನುಗಳಿಗೂ ಸಾಕಷ್ಟು ಪ್ರಮಾಣದ ನೀರು ನುಗ್ಗಿದ್ದು ಬೆಳೆ ಹಾನಿಯಾಗಿದೆ.
ನಿರಂತರವಾಗಿ ಬೀಳುತ್ತಿರೋ ಮಳೆಯಿಂದ ಶಿಗ್ಗಾಂವಿ ಪಟ್ಟಣದ ನಾಗನೂರು ಕೆರೆಗೆ ಕೋಡಿ ಬಿದ್ದಿದೆ. ಕೆರೆಯಲ್ಲಿ ಭರಪೂರ ನೀರು ತುಂಬಿ ಕೆರೆಗೆ ಕೋಡಿ ಬಿದ್ದಿದ್ದರಿಂದ ಕೆರೆಯ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಕೆರೆ ಅಕ್ಕಪಕ್ಕದ ನೂರಾರು ಎಕರೆ ರೈತರ ಜಮೀನುಗಳು ಜಲಾವೃತಗೊಂಡಿವೆ. ಮತ್ತೊಂದೆಡೆ ಹಾವೇರಿ ತಾಲೂಕಿನ ಮಣ್ಣೂರು ಗ್ರಾಮದ ಬಳಿ ರೈತರ ಜಮೀನುಗಳಿಗೆ ವರದಾ ನದಿಯ ನೀರು ನುಗ್ಗಿ, ಜಮೀನಿನಲ್ಲಿದ್ದ ಮೆಕ್ಕೆಜೋಳ, ಶೇಂಗಾ, ಮೆಣಸಿನಕಾಯಿ, ಹತ್ತಿ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತು ಹಾಳಾಗಿವೆ.