ಹಾವೇರಿ: ಜಿಲ್ಲೆಯ ಪಾವಲಿ ಕುಟುಂಬದ ಮಹಿಳೆಯರು ಕಳೆದ ಮೂವತ್ತು ವರ್ಷಗಳಿಂದ ಎಮ್ಮೆ ಸಾಕಾಣಿಕೆ ಮಾಡುತ್ತಾ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಒಂದು ಎಮ್ಮೆಯಿಂದ ಆರಂಭವಾದ ಸಾಕಾಣಿಕೆ ಇದೀಗ 30 ಎಮ್ಮೆಗಳಿಗೆ ಬಂದು ನಿಂತಿದೆ. ಮನೆಯ ದಿನನಿತ್ಯದ ಬಳಕೆಗೆಂದು ಆರಂಭವಾದ ಎಮ್ಮೆ ಸಾಕಾಣಿಕೆ ಇದೀಗ ಮನೆಯ ಅದಾಯದ ಪ್ರಮುಖ ಮೂಲವಾಗಿದೆ.
ಹೈನುಗಾರಿಕೆ ಮೂಲಕ ಸೈ ಎನಿಸಿಕೊಂಡ ಹಾವೇರಿ ಮಹಿಳೆಯರು ಹಾವೇರಿಯ ಪಾವಲಿ ಕುಟುಂಬದ ಮಹಿಳೆಯರು ಕಳೆದ 30 ವರ್ಷಗಳಿಂದ ಎಮ್ಮೆ ಸಾಕಾಣಿಕೆ ಮಾಡುವ ಮೂಲಕ ಹೈನುಗಾರಿಕೆ ಮಾಡುತ್ತಿದ್ದಾರೆ. ಮನೆಯ ಬಳಕೆಗೆಂದು ಒಂದು ಎಮ್ಮೆಯಿಂದ ಆರಂಭವಾದ ಇವರ ಸಾಕಾಣಿಕೆ ಇದೀಗ 30 ಎಮ್ಮೆಗಳಿಗೆ ಬಂದು ನಿಂತಿದೆ. ಅಲ್ಲದೇ ನಗರದ ವಿವಿಧ ಬಡಾವಣಿಗಳ ಜನರಿಗೆ ಹಾಲು ಪೂರೈಕೆ ಮಾಡುವ ಹಂತಕ್ಕೆ ತಲುಪಿದೆ. ಈ ವೃತ್ತಿ ತಮಗೆ ತೃಪ್ತಿ ತರುವ ಜೊತೆಗೆ ಅದಾಯ ಸಹ ತರುತ್ತಿದೆ ಎನ್ನುತ್ತಾರೆ ಈ ಮಹಿಳೆಯರು.
ಮುಂಜಾನೆ ಸೂರ್ಯೋದಯದಿಂದ ಆರಂಭವಾದ ಈ ಕಾಯಕ ಸೂರ್ಯಾಸ್ತದ ನಂತರ ಮುಗಿಯುತ್ತದೆ. ಮನೆಯ ಬಳಕೆಗೆ ಆರಂಭಿಸಿದ ಈ ವೃತ್ತಿ ಇದೀಗ ಮನೆಯ ಆದಾಯದ ಪ್ರಮುಖ ಮೂಲವಾಗಿದ್ದು, ಇನ್ನು ಹೆಚ್ಚು ಎಮ್ಮೆಗಳನ್ನು ಸಾಕಬೇಕು, ಹೆಚ್ಚು ಅದಾಯಗಳಿಸಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ.
ಓದಿ:2021-22ನೇ ಸಾಲಿನ ಬಜೆಟ್ ಕುರಿತು ಸಿಎಂ ತವರು ಜಿಲ್ಲೆ ಜನತೆಯ ನಿರೀಕ್ಷೆಗಳೇನು?
ಇನ್ನು ಪಾವಲಿ ಕುಟುಂಬಕ್ಕೆ ಯಾವುದೇ ಜಮೀನಾಗಲಿ, ದನಗಳ ಮೇವಿಗೆ ಬೇಕಾಗುವ ಮೂಲವಾಗಲಿ ಇಲ್ಲ. ದನಗಳಿಗೆ ಬೇಕಾಗುವ ಮೇವು ಮತ್ತು ಹಿಂಡಿಯನ್ನು ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತದೆ. ಮುಂಜಾನೆಯಿಂದ ಆರಂಭವಾದ ಇವರ ಈ ಕಾಯಕ ರಾತ್ರಿ 10ರ ತನಕ ಮುಂದುವರೆಯುತ್ತದೆ. ಗ್ರಾಮೀಣ ಬದುಕಿಗೆ ಮಾತ್ರ ಎಮ್ಮೆ ಸಾಕಾಣಿಕೆ ಎಂಬ ಮಾತನ್ನು ಈ ಕುಟುಂಬದ ಮಹಿಳೆಯರು ಸುಳ್ಳು ಮಾಡಿದ್ದಾರೆ. ಹಾವೇರಿ ನಗರದಲ್ಲಿ ಇದ್ದುಕೊಂಡೇ ಹೈನುಗಾರಿಕೆ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.