ಕರ್ನಾಟಕ

karnataka

ETV Bharat / state

ಸಾಹಸಗಾಥೆ..12 ಗುಂಟೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ರೈತ - ಬಸಾಪುರ ಗ್ರಾಮದ ಯಲ್ಲಪ್ಪ ನೀಲಪ್ಪ ಬಳ್ಳಾರಿ

ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದ ರೈತ ಯಲ್ಲಪ್ಪ ಸಾವಯುವ ಪದ್ಧತಿಯಲ್ಲಿ ಡ್ರ್ಯಾಗನ್ ಫ್ರೂಟ್(dragon fruit) ಬೆಳೆದಿದ್ದಾನೆ. ಸದ್ಯ ಯಲ್ಲಪ್ಪ ಬೆಳೆದ ಡ್ರ್ಯಾಗನ್ ಫ್ರೂಟ್‌ಗೆ ಜಿಲ್ಲಾದ್ಯಂತ ಅಧಿಕ ಬೇಡಿಕೆ ಇದೆ.

farmer who earns lakhs from dragon fruit  cultivation
ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಂತರ ರೂ. ಅದಾಯ ಗಳಿಸಿದ ರೈತ

By

Published : Nov 18, 2021, 12:10 PM IST

ಹಾವೇರಿ:ಜಿಲ್ಲೆಯಬಸಾಪುರ ಗ್ರಾಮದ ಯಲ್ಲಪ್ಪ ನೀಲಪ್ಪ ಬಳ್ಳಾರಿ ಎಂಬ ರೈತ ಕೇವಲ 2 ಎಕರೆ ಜಮೀನು ಹೊಂದಿದ ಸಣ್ಣ ಹಿಡುವಳಿದಾರ. ಆದರೆ, ಇವರು ಮಾಡಿದ ಹೊಸ ಪ್ರಯತ್ನ ಇದೀಗ ಲಕ್ಷಾಂತರ ರೂ. ಆದಾಯ ಗಳಿಕೆ ಮಾಡುವಂತೆ ಮಾಡಿದೆ.

ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ರೈತ

ರೈತ ಯಲ್ಲಪ್ಪ ತನ್ನ ಎರಡು ಎಕರೆ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಇದರಲ್ಲಿ 12 ಗುಂಟೆ ಜಮೀನಿನಲ್ಲಿ 200 ಡ್ರ್ಯಾಗನ್ ಫ್ರೂಟ್ (dragon fruit) ಗಿಡಗಳನ್ನು ಬೆಳೆದಿದ್ದಾನೆ. ಕಳೆದ 3 ವರ್ಷಗಳ ಹಿಂದೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣಿನ ಗಿಡ ಹಾಕಿದ್ದು, ಸದ್ಯ ಹಣ್ಣು ಬಿಡಲಾರಂಭಿಸಿದೆ. ಒಂದೊಂದು ಗಿಡ ಸುಮಾರು 50 ಹಣ್ಣುಗಳನ್ನು ಬಿಟ್ಟಿದ್ದು, ಪ್ರತಿ ಹಣ್ಣು 50 ರೂ.ಯಿಂದ 70 ರೂ.ವರೆಗೆ ಮಾರಾಟವಾಗುತ್ತಿದೆ.

4 ಲಕ್ಷ ರೂ. ಆದಾಯ ಗಳಿಕೆ:

ಯಲಪ್ಪ ಸಾವಯುವ ಪದ್ಧತಿಯಲ್ಲಿ ಡ್ರ್ಯಾಗನ್ ಫ್ರೂಟ್(dragon fruit) ಬೆಳೆದಿದ್ದಾರೆ. ಪರಿಣಾಮ ಯಲ್ಲಪ್ಪ ಬೆಳೆದ ಡ್ರ್ಯಾಗನ್ ಫ್ರೂಟ್‌ಗೆ ಜಿಲ್ಲಾದ್ಯಂತ ಅಧಿಕ ಬೇಡಿಕೆ ಇದೆ. ವ್ಯಾಪಾರಿಗಳು ಜಮೀನಿಗೆ ಬಂದು ಹಣ್ಣು ಖರೀದಿ ಮಾಡುತ್ತಿದ್ದಾರೆ. ಪ್ರಸ್ತುತ ಒಂದೇ ವರ್ಷದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಗೆ ಮಾಡಿದ ಖರ್ಚು ತೆಗೆದು 4 ಲಕ್ಷ ರೂ. ಆದಾಯಗಳಿಸಿದ್ದಾರೆ.

ಅಲ್ಲದೇ ಯಲ್ಲಪ್ಪ ಅವರು ಡ್ರ್ಯಾಗನ್ ಫ್ರೂಟ್ ನರ್ಸರಿ ಮಾಡುತ್ತಿದ್ದು, ಬೇರೆ ರೈತರಿಗೆ ಡ್ರ್ಯಾಗನ್ ಫ್ರೂಟ್ ಸಸಿಗಳನ್ನ ನೀಡುತ್ತಿದ್ದಾರೆ. ಪ್ರತಿ ಸಸಿಗೆ 40 ರೂ. ನಿಗದಿ ಮಾಡಿದ್ದಾರೆ. ಈತನ ಜಮೀನಿನಲ್ಲಿ ಈಗಾಗಲೇ ಸಾವಿರಾರು ಸಸಿಗಳು ಸಿದ್ಧಗೊಂಡಿವೆ. ಮುಂದಿನ ವರ್ಷದ ಫೆಬ್ರವರಿ ತಿಂಗಳಿಗೆ ಸಾಕಾಗುವಷ್ಟು ಸಸಿಗಳಿಗೆ ಈಗಾಗಲೇ ರೈತರು ಮುಂಗಡ ಬುಕ್ಕಿಂಗ್​ ಮಾಡಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ಉದ್ಯೋಗ ಕೊಡಿಸುವುದಾಗಿ ಮಹಿಳೆಗೆ 4 ಲಕ್ಷ ರೂ. ವಂಚನೆ, ಇಬ್ಬರು ಗಾಂಜಾ ಮಾರಾಟಗಾರರ ಬಂಧನ

ABOUT THE AUTHOR

...view details