ಹಾವೇರಿ:ಗುರುವಾರ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ. ನಾಳೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಯಾವ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂಬುವುದರ ಪ್ರಾತ್ಯಕ್ಷಿಕೆಯನ್ನು ಇಂದು ನಡೆಸಲಾಯಿತು.
ಹಾವೇರಿ: ಎಸ್ಎಸ್ಎಲ್ಸಿ ಪರೀಕ್ಷಾ ವೇಳೆ ಅನುಸರಿಸುವ ಕ್ರಮಗಳ ಪ್ರಾತ್ಯಕ್ಷಿಕೆ - Lines School in Haveri District
ಗುರುವಾರ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ. ನಾಳೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಾಗ ಯಾವ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂಬುವುದರ ಪ್ರಾತ್ಯಕ್ಷಿಕೆಯನ್ನು ಇಂದು ನಡೆಸಲಾಯಿತು.
ಹಾವೇರಿ ಲಯನ್ಸ್ ಶಾಲೆಯಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹೆಚ್. ಪಾಟೀಲ್ ಪಾಲ್ಗೊಂಡಿದ್ದರು. ಕರ್ತವ್ಯಕ್ಕೆ ನೇಮಿಸಲಾಗಿರುವ ಶಿಕ್ಷಕರನ್ನು ವಿದ್ಯಾರ್ಥಿಗಳಂತೆ ಸರತಿ ಸಾಲಿನಲ್ಲಿ ನಿಲ್ಲಿಸಿ ಪ್ರಾತ್ಯಕ್ಷಿಕೆ ನೀಡಲಾಯಿತು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದಂತೆ ಮೊದಲು ಸ್ಯಾನಿಟೈಜರ್ ನೀಡಲಾಗುವುದು. ನಂತರ ಸ್ಕ್ರೀನಿಂಗ್, ಆದಾದ ನಂತರ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಪರೀಕ್ಷಾ ಕೊಠಡಿಗಳಿಗೆ ಹೋಗುವಂತೆ ಮಾರ್ಗದರ್ಶನ ನೀಡಲಾಗುವುದು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ 90 ನಿಮಿಷಗಳ ಮೊದಲು ಕೇಂದ್ರಕ್ಕೆ ಆಗಮಿಸುವಂತೆ ತಿಳಿಸಲಾಯಿತು.
ಇನ್ನೂ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಪರೀಕ್ಷಾ ಕೇಂದ್ರದ ಬಳಿ 'ಎಸ್ಎಸ್ಎಲ್ಸಿ ಪರೀಕ್ಷಾ ಸಂಭ್ರಮ 2020' ಎಂದು ಬರೆದು ಶಾಲೆಯ ಸ್ವಾಗತ ಕಮಾನಿಗೆ ಶಾಮಿಯಾನ ಮತ್ತು ಬಲೂನ್ಗಳಿಂದ ಅಲಂಕರಿಸಲಾಗಿದೆ.