ಹಾನಗಲ್:ಅನಗತ್ಯವಾಗಿ ರಸ್ತೆಯಲ್ಲಿ ಬೈಕ್ ಮೇಲೆ ಸಂಚಾರ ಮಾಡುತ್ತಿದ್ದ ಸವಾರರಿಗೆ ಹಾವೇರಿ ಜಿಲ್ಲಾ ಹಾನಗಲ್ ಪಟ್ಟಣ ಪೊಲೀಸರು ಬಿಸಿ ಮುಟ್ಟಿಸಿದ್ದು, ಬೈಕ್ಗಳನ್ನು ಸೀಜ್ ಮಾಡಿದ್ದಾರೆ.
ಬೈಕ್ ಸೀಜ್ ಮಾಡಿ ಬಿಸಿ ಮುಟ್ಟಿಸಿದ ಹಾನಗಲ್ ಪೊಲೀಸರು - ಹಾವೇರಿ ಕೊರೊನಾ ವೈರಸ್
ಕೋವಿಡ್-19 ಕಾವಿಗೆ ಭಾರತ ನಲುಗಿದೆ. ಈ ಸಂದರ್ಭದಲ್ಲಿ ಜನರು ಎಚ್ಚರಿಕೆ ವಹಿಸಬೇಕಾಗಿದೆ. ಆದ್ರೆ ಕೆಲ ಕಿಡಗೇಡಿಗಳು ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಸದ್ಯ ಅನಗತ್ಯವಾಗಿ ತಿರುಗಾಡುತ್ತಿದ್ದ ಜನರಿಗೆ ಹಾನಗಲ್ ಪೊಲೀಸರು ಬಿಸಿ ಮುಟ್ಟಿಸಿದ್ದು, ಬೈಕ್ ಸೀಜ್ ಮಾಡಿದ್ದಾರೆ.
ಹಾನಗಲ್ ಪೊಲೀಸ್
ಈಡಿ ಭಾರತವೇ ಲಾಕ್ಡೌನ್ ಆಗಿದೆ. ಜನರು ಜೀವ ಭಯದಿಂದ ಮನೆಯೊಳಗಿದ್ದಾರೆ. ಆದ್ರೆ ಕೆಲ ಕಿಡಗೇಡಿಗಳು ಮಾತ್ರ ರಸ್ತೆಯಲ್ಲಿ ತಿರುಗಾಡುತ್ತಿದ್ದು, ಅಂತಹವರಿಗೆ ಸದ್ಯ ಹಾನಗಲ್ ಪೊಲೀಸರು ಬಿಸಿ ಮುಟ್ಟಿಸಲು ಬೈಕ್ ಸೀಜ್ ಮಾಡಿದ್ದಾರೆ. ಅಲ್ಲದೆ ಮನೆ ಬಿಟ್ಟು ಹೊರ ಬರದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.