ರಾಣೆಬೆನ್ನೂರು: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ತಾಲೂಕಿನ ಆರೇಮಲ್ಲಾಪುರ ಗ್ರಾಮದ ಊರಿನ ಪ್ರಮುಖ ರಸ್ತೆಯಲ್ಲಿ ನಿಂಬೆಹಣ್ಣು ಹಾಕಲಾಗಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮತದಾನದ ಮುನ್ನ ದಿನವೇ ಗ್ರಾಮಸ್ಥರ ನಿದ್ದೆಗೆಡಿಸಿತು ನಿಂಬೆ ಹಣ್ಣಿನ ರಾಶಿ : ಮಾಟ-ಮಂತ್ರದ ಶಂಕೆ! - ರಾಣೆಬೆನ್ನೂರು ಗ್ರಾಪಂ ಚುನಾವಣೆ ಹಿನ್ನೆಲೆ ಮಾಟ-ಮಂತ್ರದ ಶಂಕೆ
ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಊರಿನ ಪ್ರಮುಖ ರಸ್ತೆಯಲ್ಲಿ ನಿಂಬೆಹಣ್ಣು ಎಸೆದಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಚುನಾವಣೆ ಹಿನ್ನೆಲೆ ಮಾಟ ಮಾಡಿಸಲಾಗಿದೆ ಎಂದು ಮಾತನಾಡುತ್ತಿದ್ದಾರೆ.
ನಾಳೆ ರಾಣೆಬೆನ್ನೂರು ತಾಲೂಕಿನ 33 ಗ್ರಾಮ ಪಂಚಾಯತ್ಗಳಿಗೆ ಮತದಾನ ನಡೆಯಲಿದೆ. ಈ ನಡುವೆ ಆರೇಮಲ್ಲಾಪುರ ಗ್ರಾಮದ ಪ್ರಮುಖ ರಸ್ತೆ ಮತ್ತು ಗಡಿಯಲ್ಲಿ ಯಾರೋ ನಿಂಬೆಹಣ್ಣು ಎಸೆದು ಹೋಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಚುನಾವಣೆ ಹಿನ್ನೆಲೆ ಮಾಟ ಮಾಡಿಸಲಾಗಿದೆ ಎಂದು ಮಾತನಾಡುತ್ತಿದ್ದಾರೆ. ಆರೇಮಲ್ಲಾಪುರ ಗ್ರಾಮದಲ್ಲಿ ಒಟ್ಟು 12 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, ಈಗಾಗಲೇ ಬಹಿರಂಗ ಪ್ರಚಾರ ಮುಗಿದಿದೆ.
ನಾಳೆ ನಡೆಯುವ ಮತದಾನಕ್ಕೂ ಮುನ್ನ ಮಾಟ ಮಾಡಿಸಲಾಗಿದೆ ಎಂದು ಅಭ್ಯರ್ಥಿಗಳು ಹೇಳುತ್ತಿದ್ದು, ಇದನ್ನು ಮಾಡಿಸಿದವರು ಯಾರು ಎಂಬುದು ತಿಳಿಯದಂತಾಗಿದೆ. ಸದ್ಯ ಜನರು ಆತಂಕದಿಂದ ಕಾಲ ಕಳೆಯುವಂತಾಗಿದೆ.