ಕರ್ನಾಟಕ

karnataka

ETV Bharat / state

ಸಮಸ್ಯೆಗಳಿದ್ದರೆ ಮುಕ್ತವಾಗಿ ಚರ್ಚಿಸಿ: ಹಾವೇರಿ ನೂತನ ಡಿಸಿ - news

ಮೂಲತಃ ಉತ್ತರ ಪ್ರದೇಶದವರಾದ  ನೂತನ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು 2010ರ ಬಿಹಾರ ಕೇಡರಿನ್ ಐ.ಎ.ಎಸ್.ಅಧಿಕಾರಿ. 2010 ರಿಂದ 2014ರವರೆಗೆ ಬಿಹಾರದಲ್ಲಿ ಕೆಲಸ ಮಾಡಿ, ಕರ್ನಾಟಕಕ್ಕೆ ವರ್ಗಾವಣೆಗೊಂಡು ಈವರೆಗೆ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಐಐಟಿಯ ಬಿಟೆಕ್ ಪದವೀಧರರಾಗಿದ್ದಾರೆ ಹಾಗೂ ಕನ್ನಡ ಬಲ್ಲವರಾಗಿದ್ದಾರೆ.

ಹಾವೇರಿ ನೂತನ ಡಿಸಿ

By

Published : Feb 26, 2019, 9:35 AM IST

ಹಾವೇರಿ: ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ, ಸಮಸ್ಯೆಗಳಿದ್ದರೆ ಮುಕ್ತವಾಗಿ ಚರ್ಚಿಸಿ ಎಂದು ಹಾವೇರಿ ನೂತನ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮನವಿ ಮಾಡಿದ್ದಾರೆ.

ಹಾವೇರಿಯಲ್ಲಿ ಸೋಮವಾರ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕಳೆದ ಎರಡು ವರ್ಷ ಎಂಟು ತಿಂಗಳು ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿರುವ ಡಾ.ವೆಂಕಟೇಶ್ ಸರ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೈಗೊಂಡಿರುವ ಕೆಲಸಗಳು ಯಾವ ಯಾವ ಹಂತದಲ್ಲಿವೆ ಎಂದು ನನ್ನೊಂದಿಗೆ ಚರ್ಚಿಸಿದ್ದಾರೆ ವಿಸ್ತಾರವಾಗಿ ಹೇಳಿದ್ದಾರೆ. ಅತ್ಯಂತ ಆಸಕ್ತಿಯಿಂದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಮೂಲತಃ ಉತ್ತರ ಪ್ರದೇಶದವರಾದ ನೂತನ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು 2010ರ ಬಿಹಾರ ಕೇಡರಿನ್ ಐ.ಎ.ಎಸ್.ಅಧಿಕಾರಿ. 2010 ರಿಂದ 2014ರವರೆಗೆ ಬಿಹಾರದಲ್ಲಿ ಕೆಲಸ ಮಾಡಿ, ಕರ್ನಾಟಕಕ್ಕೆ ವರ್ಗಾವಣೆಗೊಂಡು ಈವರೆಗೆ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಐಐಟಿಯ ಬಿಟೆಕ್ ಪದವೀಧರರಾಗಿದ್ದಾರೆ ಹಾಗೂ ಕನ್ನಡ ಬಲ್ಲವರಾಗಿದ್ದಾರೆ.

ABOUT THE AUTHOR

...view details