ಕರ್ನಾಟಕ

karnataka

ETV Bharat / state

ಕೆಪಿಸಿಸಿ ಅಧ್ಯಕ್ಷನಾಗಲು ದಿನೇಶ್​ ಗುಂಡೂರಾವ್ ನಾಲಾಯಕ್ : ಎಂ.ಪಿ ರೇಣುಕಾಚಾರ್ಯ - ದಿನೇಶ್​ ಗುಂಡೂರಾವ್ ಬಗ್ಗೆ ಮಾತನಾಡಿದ ರೇಣುಕಾಚಾರ್ಯ

ದಿನೇಶ್​ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷನಾಗಲು ನಾಲಾಯಕ್, ಕಾಂಗ್ರೆಸ್ಸಿಗರಿಗೆ ಬುಗರಿ ರೀತಿ ಆಡುವ, ರಬ್ಬರ್ ಸ್ಟಾಂಪ್ ನಂತೆ ಇರುವ ಅಧ್ಯಕ್ಷರು ಬೇಕು ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

Renukacharya
ರೇಣುಕಾಚಾರ್ಯ

By

Published : Nov 29, 2019, 6:32 PM IST

ಹಾವೇರಿ :ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಒಬ್ಬ ಅಸಮರ್ಥ ಹಾಗೂ ಕೆಪಿಸಿಸಿ ಅಧ್ಯಕ್ಷನಾಗಲು ನಾಲಾಯಕ್ ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕಮತ್ತೂರು ಗ್ರಾಮದಲ್ಲಿ ಮಾತನಾಡಿದ ಅವರು, ದಿನೇಶ್​ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷನಾಗಲು ನಾಲಾಯಕ್ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ಸಿಗರಿಗೆ ರಬ್ಬರ್ ಸ್ಟಾಂಪ್ ನಾಯಕರಂತೆ ಕೇಳುವ ಅಧ್ಯಕ್ಷರು ಬೇಕು ಎಂದು ಆರೋಪಿಸಿದರು.

ಮೈತ್ರಿ ಸರ್ಕಾರ ಕೆಡವಿದ 17 ಶಾಸಕರು ಅನರ್ಹರಲ್ಲ ಅವರು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದಾರೆ, ಬಿಜೆಪಿ ಹಿಂಬಾಗಲಿನಿಂದ ಸರ್ಕಾರ ರಚಿಸುವ ಪ್ರಯತ್ನ ಮಾಡಿಲ್ಲ. ಪ್ರತಿಪಕ್ಷದವರು ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದು ಬರಲಿ ನೋಡೋಣ ಎಂದು ಸವಾಲೆಸೆದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕರು ಕುರಿ ಕೋಳಿಯಂತೆ ಮಾರಾಟವಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಸಿದ್ದರಾಮಯ್ಯ ನೋಡಿ ಮಾತಾಡಲಿ ಎಂದರು. ತಾವು ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಜೊತೆ 7 ಜನ ಶಾಸಕರನ್ನ ಕರೆದುಕೊಂಡು ಹೋದಿರಲ್ಲಾ ಅವಾಗ ನಿವೇಷ್ಟು ದುಡ್ಡಿಗೆ ಸೇಲ್ ಆಗಿದ್ರಿ ಎಂದು ಪ್ರಶ್ನಿಸಿದರು. ಪ್ರತಿಪಕ್ಷ ನಾಯಕ, ಉಪಮುಖ್ಯಮಂತ್ರಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರ ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲಾ ಎಂದು ರೇಣುಕಾಚಾರ್ಯ ತಿಳಿಸಿದರು.

ABOUT THE AUTHOR

...view details