ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು: ಕೋರ್ಟ್‌ ಸಿಬ್ಬಂದಿ ಅನುಮಾನಾಸ್ಪದ ಸಾವು - Court staff suspected died in Ranebennur

ರಾಣೆಬೆನ್ನೂರು ಕೋರ್ಟ್ ಆವರಣದಲ್ಲಿ ಸಿಬ್ಬಂದಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Ranebennur
ರವಿಕುಮಾರ್ ನಾಗಪ್ಪ ಬೇನ್ನೂರು

By

Published : May 24, 2021, 11:26 AM IST

ರಾಣೆಬೆನ್ನೂರು: ರಾಣೆಬೆನ್ನೂರು ಕೋರ್ಟ್​ನಲ್ಲಿ ಜವಾನನಾಗಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಕೋರ್ಟ್‌ ಸಿಬ್ಬಂದಿ ಅನುಮಾನಾಸ್ಪದ ಸಾವು

ತಾಲೂಕಿನ ಆರೇಮಲ್ಲಾಪುರ ಗ್ರಾಮದ ರವಿಕುಮಾರ್ ನಾಗಪ್ಪ ಬೇನ್ನೂರು (45) ಮೃತ ಸಿಬ್ಬಂದಿ. ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಬಳಿಕ ರಾಣೆಬೆನ್ನೂರು ನ್ಯಾಯಾಲಯದಲ್ಲಿ ಜವಾನರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದು, ಊಟ ಮಾಡಿ ನ್ಯಾಯಾಲಯದ ಆವರಣದಲ್ಲಿ ಮಲಗಿದ್ದಾರೆ. ಈ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ ಕೋರ್ಟ್ ಸಿಬ್ಬಂದಿ ಕರ್ತವ್ಯಕ್ಕೆ ಬಂದ ವೇಳೆ ಜವಾನ ಮೃತಪಟ್ಟಿದ್ದು ಗೊತ್ತಾಗಿದೆ. ಸ್ಥಳಕ್ಕೆ ರಾಣೆಬೆನ್ನೂರು ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ತಗ್ಗಿದ ಕೊರೊನಾ ಅಬ್ಬರ: 5,722 ಹೊಸ ಕೇಸ್​ ಪತ್ತೆ

ABOUT THE AUTHOR

...view details