ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು ತಾಲೂಕಿನಲ್ಲಿಂದು ಮೂವರಿಗೆ ಕೊರೊನಾ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿಂದು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರು ವಾಸಿಸುತ್ತಿದ್ದ 100 ಮೀಟರ್ ಪ್ರದೇಶವನ್ನ ಸೀಲ್​ ಡೌನ್​ ಮಾಡಲಾಗಿದೆ.

Corona Positive for three in Ranebennur Taluk
ರಾಣೆಬೆನ್ನೂರು ತಾಲೂಕಿನಲ್ಲಿಂದು ಮೂವರಿಗೆ ಕೊರೊನಾ ಪಾಸಿಟಿವ್​

By

Published : Jul 8, 2020, 7:59 PM IST

ಹಾವೇರಿ:ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿಂದು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ರಾಣೆಬೆನ್ನೂರು ತಾಲೂಕಿನಲ್ಲಿಂದು ಮೂವರಿಗೆ ಕೊರೊನಾ​

ರಾಣೆಬೆನ್ನೂರಿನ ವಾಗೀಶ ನಗರ, ಕೊರವರ ಓಣಿ ಮತ್ತು ಮೃತ್ಯುಂಜಯ ನಗರದ ಮೂವರು ಪುರುಷರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂವರು ಯಾವುದೇ ಸಂಪರ್ಕ ಹಾಗೂ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ ಎನ್ನಲಾಗಿದೆ. ಸೋಂಕಿತರು ವಾಸಿಸುತ್ತಿದ್ದ 100 ಮೀಟರ್ ಪ್ರದೇಶವನ್ನ ಸೀಲ್​ ಡೌನ್​ ಮಾಡಲಾಗಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡರ ಮನೆ ಇರುವ ವಾಗೀಶ ನಗರದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆ ಕೋಳಿವಾಡರ ಮನೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೀಗ ಹಾಕಲಾಗಿದೆ.

ABOUT THE AUTHOR

...view details