ಕರ್ನಾಟಕ

karnataka

ETV Bharat / state

ದಾವಣಗೆರೆ, ಹಾವೇರಿ ಜಿಲ್ಲೆಯ ಇಂದಿನ ಕೊರೊನಾ ವರದಿ

ದಾವಣಗೆರೆ, ಹಾವೇರಿ ಜಿಲ್ಲೆಯ ಇಂದಿನ ಕೊರೊನಾ ವರದಿ...

Corona positive for 7 people in Haveri district
ಹಾವೇರಿಯಲ್ಲಿಂದು 7 ಮಂದಿಗೆ ಕೊರೊನಾ...25 ಜನರು ಗುಣಮುಖ

By

Published : Oct 30, 2020, 7:43 PM IST

Updated : Oct 30, 2020, 9:10 PM IST

ದಾವಣಗೆರೆ: ಜಿಲ್ಲೆಯಲ್ಲಿ 56 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 20,728ಕ್ಕೆ ಏರಿದೆ.

ಬಳ್ಳಾರಿ‌ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಯಾ ಗ್ರಾಮದ 58 ವರ್ಷದ ಮಹಿಳೆ ಚಿಗಟೇರಿ ಜಿಲ್ಲಾ ಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ವೈರಾಣುವಿನಿಂದ 257 ಜನರು ಮೃತಪಟ್ಟಂತಾಗಿದೆ.

ದಾವಣಗೆರೆ 19, ಹರಿಹರ 12, ಜಗಳೂರು 4, ಚನ್ನಗಿರಿ 9, ಹೊನ್ನಾಳಿ 11 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ. 70 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ ಒಟ್ಟು 19,692 ಜನರು ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 779 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ‌. 986 ಜನರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ

ಹಾವೇರಿ:ಜಿಲ್ಲೆಯಲ್ಲಿಂದು 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,464ಕ್ಕೆ ಏರಿಕೆಯಾಗಿದೆ.

ವಿವಿಧ ಕೋವಿಡ್ ಆಸ್ಪತ್ರೆಗಳಿಂದ 25 ಜನರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದು, ಮೃತರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ 215 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 35 ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕುವಾರು ಸೋಂಕಿತರು:ಬ್ಯಾಡಗಿ 01, ಹಾನಗಲ್ 01, ಹಿರೇಕೆರೂರು 02, ರಾಣೇಬೆನ್ನೂರು ಮೂವರಿಗೆ ಸೋಂಕು ತಗುಲಿದೆ.

Last Updated : Oct 30, 2020, 9:10 PM IST

ABOUT THE AUTHOR

...view details