ಹಾವೇರಿ:ಆಶಾ ಕಾರ್ಯಕರ್ತೆಗೆ ಕೊರೊನಾ ಸೊಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆ ಊರಿನ ಜನರಿಗೆ ಕೆಲಸ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಗ್ರಾಮದ ವ್ಯಕ್ತಿಯೋರ್ವರು ಹೇಳಿದ್ದಾರೆ.
ಆಶಾ ಕಾರ್ಯಕರ್ತೆಗೆ ಕೊರೊನಾ: ಈ ಊರಿನ ಜನಕ್ಕೆ ಯಾರೂ ನೀಡುತ್ತಿಲ್ಲವಂತೆ ಕೆಲಸ..! - ಆಶಾ ಕಾರ್ಯಕರ್ತೆಗೆ ಕೊರೊನಾ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರೋರ್ವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜುಲೈ 04 ರಂದು ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು ಕಂಡು ಬಂದಿದೆ. ಇದರ ಬೆನ್ನೆಲ್ಲೇ ಇಲ್ಲಿನ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಸುಮಾರು 100 ಕುಟುಂಬಗಳನ್ನು ಹೊಂದಿರುವ ಹುಣಸಿಕಟ್ಟಿ ಗ್ರಾಮ ರಾಣೆಬೆನ್ನೂರು ನಗರದಿಂದ ನಾಲ್ಕು ಕಿ.ಮೀ. ದೂರವಿದೆ. ಬಹುತೇಕ ಗ್ರಾಮದ ಜನರು ರಾಣೆಬೆನ್ನೂರು ಸೇರಿದಂತೆ ಇತರೆ ಕಡೆ ಗೌಂಡಿ ಕೆಲಸ, ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ಆದರೆ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಗೆ ಕೊರೊನಾ ಬಂದ್ ಕಾರಣ ಇಲ್ಲಿನ ಯಾರೊಬ್ಬರಿಗೂ ಕೆಲಸಗಳು ಸಿಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ಲಾಕ್ಡೌನ್ ನಡುವೆ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಜೀವನ ನಡೆಸಲು ತೊಂದರೆಯಾಗುತ್ತಿದೆ. ಇದರಿಂದ ತಾಲೂಕ ಆಡಳಿತ ಹುಣಸಿಕಟ್ಟಿ ಗ್ರಾಮಕ್ಕೆ ಪರ್ಯಾಯವಾಗಿ ಉದ್ಯೋಗ ನೀಡಲು ಮುಂದಾಬೇಕಾಗಿದೆ ಎಂದು ಮಂಜುನಾಥ ಹುಣಸಿಕಟ್ಟಿ ಎಂಬುವರು ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.