ಹಾವೇರಿ: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಸರ್ಕಾರಿ ನೌಕರರ ವಸತಿಗೃಹಗಳನ್ನು ನಿರ್ಮಿಸಿ ಹಲವು ದಶಕಗಳೇ ಕಳೆದಿವೆ. ಹಾವೇರಿ ತಾಲೂಕು ಕೇಂದ್ರವಾಗಿದ್ದಾಗ ಅಂದಿನ ಸರ್ಕಾರಿ ನೌಕರರಿಗಾಗಿ 1965ರಲ್ಲಿ ವಸತಿಗೃಹಗಳು ನಿರ್ಮಾಣಗೊಂಡಿದ್ದವು. ಪಿಡಬ್ಲುಡಿ ಇಲಾಖೆಯಲ್ಲಿ ಸುಮಾರು 100ಕ್ಕೂ ಅಧಿಕ ವಸತಿಗೃಹಗಳಿದ್ದು ಇದರಲ್ಲಿ 70ರಷ್ಟು ಮನೆಗಳು ಶಿಥಿಲಗೊಂಡಿವೆ.
ಪಕ್ಕದ ಜಿಲ್ಲೆ, ನಗರಗಳಲ್ಲಿ ವಾಸವಾಗಿರುವ ನೌಕರರು.. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸಮರ್ಪಕ ವಸತಿಗೃಹಗಳು ಇಲ್ಲದ ಕಾರಣ ಸರ್ಕಾರಿ ನೌಕರರು ನಗರದಲ್ಲಿ ಉಳಿಯುತ್ತಿಲ್ಲಾ ಎಂಬ ಆರೋಪಗಳು ಕೇಳಿಬಂದಿದೆ. ಹಾವೇರಿಯಲ್ಲಿ ಕೆಲಸ ಮಾಡುವ ಬಹುತೇಕ ಸರ್ಕಾರಿ ನೌಕರರು ನೇರೆಯ ಜಿಲ್ಲೆಗಳಾದ ದಾವಣಗೆರೆ, ಧಾರವಾಡ, ಗದಗ, ರಾಣೆಬೆನ್ನೂರು ಸೇರಿದಂತೆ ದೂರದ ಊರುಗಳಲ್ಲಿ ಮನೆ ಮಾಡಿದ್ದಾರೆ.
ಬಾಡಿಗೆ ಮನೆಗಳಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಿದೆ.. ಈ ಕಟ್ಟಡಗಳಲ್ಲಿ ಕೆಲವನ್ನು ತೆರವುಗೊಳಿಸಿ ಹೊಸದಾಗಿ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರಿಗೆ ಇವು ಸಾಲುತ್ತಿಲ್ಲ. ಹಾವೇರಿಗೆ ಆಗಮಿಸುವ ಸರ್ಕಾರಿ ನೌಕರರು ಒಂದು ಬಾಡಿಗೆ ಮನೆಯಲ್ಲಿರಬೇಕು ಇಲ್ಲದಿದ್ದರೆ ಸಮೀಪದ ಬೇರೆ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರ ಹಾವೇರಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜಿಲ್ಲೆಯಾಗಿ 25 ವರ್ಷಗಳೇ ಕಳೆದಿವೆ. ಆದರೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ವಸತಿಗೃಹಗಳು ಸರ್ಕಾರಿ ನೌಕರರಿಗೆ ಲಭ್ಯವಿಲ್ಲದಿರುವುದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ ಒತ್ತಾಯಿಸಿದರು.